ಕುವೆಂಪು ನಗರದಲ್ಲಿ ಪ್ರೇರಣ ಆಸ್ಪತ್ರೆ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಜೂ. 9
ಕುವೆಂಪುನಗರ ಉದಯರವಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಪ್ರೇರಣ ಆಸ್ಪತ್ರೆಯನ್ನು (ನರ ಮತ್ತು ಮಾನಸಿಕ ರೋಗ ಚಿಕಿತ್ಸಾ ಕೇಂದ್ರ) ಶಾಸಕ ಎಂ.ಕೆ. ಸೋಮಶೇಖರ್ ಭಾನುವಾರ ಮಧ್ಯಾಹ್ನ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಆಸ್ಪತ್ರೆಯಲ್ಲಿ 45 ಹಾಸಿಗೆಗಳ ವ್ಯವಸ್ಥೆಯಿದ್ದು, ಡಿ ಅಡಿಕ್ಷನ್, ನ್ಯೂರೋ ರಿಹಾಬಿಲೇಷನ್, ಲೈಂಗಿಕ ಆರೋಗ್ಯ ಕೇಂದ್ರ, ಮಕ್ಕಳ ಮಾರ್ಗದರ್ಶನ, ಕಲಿಕೆ ನ್ಯೂನತೆ ಕ್ಲಿನಿಕ್, ತಲೆನೋವು, ನಿದ್ರೆ, ಹಿರಿಯರ ಮತ್ತು ಸ್ಮರಣೆ ಕ್ಲಿನಿಕ್, ಸೈಕೋಥೆರಪಿ, ಸೈಕೋ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಹಲವು ರೀತಿಯ ಚಿಕಿತ್ಸೆಗಳು ನೀಡಲಾಗುತ್ತದೆ.
ನಗರಪಾಲಿಕೆ ಸದಸ್ಯರಾದ ಸ್ನೇಕ್ ಶ್ಯಾಮ್, ಸುನಿಲ್ಕುಮಾರ್, ಪ್ರೇರಣ ಆಸ್ಪತ್ರೆಯ ನಿರ್ದೇಶಕ ಹಾಗೂ ಮಾನಸಿಕ ರೋಗ ತಜ್ಞ ಡಾ.ಎಚ್.ಆರ್. ಅಭಿಜಿತ್, ಆಸ್ಪತ್ರೆಯ ಮುಖ್ಯ ಸಲಹೆಗಾರರಾದ ಮಾನಸಿಕ ರೋಗ ತಜ್ಞ ಡಾ.ಎಚ್.ಎಸ್. ವೆಂಕಟೇಶ್, ನಿರ್ದೇಶಕ ಡಾ.ಎಂ.ಎಸ್. ದರ್ಶನ್ ಇದ್ದರು.
ಆಸಕ್ತರು ದೂ. 0821- 4006000, 4246000 ಸಂಪರ್ಕಿಸಬಹುದು.