ಜಯನಗರ ತಂಡಕ್ಕೆ 121 ರನ್ ಗೆಲವು
ಮೈಸೂರು: ಎನ್.ಜೆ. ಗೌತಮ್ ಸಿಡಿಸಿದ ಅಮೋಘ ಶತಕದ ನೆರವಿನಿಂದಾಗಿ ಜಯನಗರ ಕ್ರಿಕೆಟ್ ಕ್ಲಬ್ ತಂಡವು ಸರಸ್ವತಿಪುರಂ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 121 ರನ್ಗಳ ಜಯ ದಾಖಲಿಸಿದೆ. ನಗರದ ಗಂಗೋತ್ರಿ ಗ್ಲೇಡ್ಸ್ನಲ್ಲಿ ನಡೆದ ಕೆಎಸ್ಸಿಎ ಮೈಸೂರು ವಲಯದ ಮೊದಲ ವಿಭಾಗೀಯ ಲೀಗ್ ಪಂದ್ಯಾವಳಿಯಲ್ಲಿ ಎನ್.ಜೆ. ಗೌತಮ್ 14 ಬೌಂಡರಿ ಒಳಗೊಂಡ 136 ರನ್ ಪೇರಿಸುವ ಮೂಲಕ ಶತಕ ಸಿಡಿಸಿದರು. ಈ ನೆರವಿನಿಂದಾಗಿ ಜಯನಗರ ತಂಡವು 41 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 302 ರನ್ ಕಲೆಹಾಕಿತು. ತಂಡದ ಪರ ಗೌತಮ್ ಹೊರತುಪಡಿಸಿ ರಜತ್ (88) ರನ್ ಬಾರಿಸಿದರು. ಇದಕ್ಕೆ ಪ್ರತಿಯಾಗಿ ಸರಸ್ವತಿಪುರಂ ತಂಡವು 55.3 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು. ಮತ್ತೊಂದು ಪಂದ್ಯದಲ್ಲಿ ಎಫ್ಯುಸಿಸಿ ತಂಡವು 50.1 ಓವರ್ಗಳಲ್ಲಿ 204 ರನ್ ಸಂಪಾದಿಸಿದರೆ, ಮೈಸೂರು ಜಿಮ್ಖಾನ ತಂಡ 39.3 ಓವರ್ಗಳಲ್ಲಿ 138 ರನ್ ಗಳಿಸಿ ಸೋಲೊಪ್ಪಿಕೊಂಡಿತು.