ಶಬ್ದಮಾಲಿನ್ಯ ಜಾಗೃತಿಗಾಗಿ ವಿದ್ಯಾರ್ಥಿಗಳ ಸೈಕಲ್ ರ್ಯಾಲಿ
ಕ.ಪ್ರ.ವಾರ್ತೆ ಮೈಸೂರು ಜೂ. 9
ಶಬ್ದ ಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆಯ (ಆಯಿಷ್) ಶ್ರವಣಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಶನಿವಾರ ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದರು.
ನಗರದ ಆಯುರ್ವೇದ ಆಸ್ಪತ್ರೆ ವೃತ್ತದ ಬಳಿಯಿಂದ ಆರಂಭವಾದ ಸೈಕಲ್ ರ್ಯಾಲಿಗೆ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ಆನಂದ್ ವಿ. ಪಾಟೀಲ್ ರ್ಯಾಲಿಗೆ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಶೋಕ ವೃತ್ತದಲ್ಲಿ ರ್ಯಾಲಿ ಅಂತ್ಯಗೊಂಡಿತು.
ಆಯಿಷ್ ಶ್ರವಣಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪಿ. ಮಂಜುಳಾ ಮಾತನಾಡಿ, ಪರಿಸರ ಮಾಲಿನ್ಯದಲ್ಲಿ ಶಬ್ದ ಮಾಲಿನ್ಯವೂ ಒಂದಾಗಿದೆ. ಶಬ್ದ ಮಾಲಿನ್ಯವೂ ಕಿವಿ ಮಾತ್ರವಲ್ಲ, ಮನುಷ್ಯನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮೊಬೈಲ್ ಹೆಡ್ಸೆಟ್ ಬಳಕೆ, ಕಾರ್ಯಕ್ರಮಗಳಲ್ಲಿ ಲೌಡ್ ಸ್ಪೀಕರ್ಗಳಿಂದಲೂ ಕಿವಿಗೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.