ಡೆಂಘೀ ವಿರುದ್ಧ ಜಾಗೃತಿ ಜಾಥಾ
ಕ.ಪ್ರ.ವಾರ್ತೆ ಎಚ್.ಡಿ. ಕೋಟೆ ಜೂ. 10
ಜಿಲ್ಲೆಯಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಇಲ್ಲಿನ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಮಕ್ಕಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಭಿತ್ತಿಪತ್ರ ಹಂಚುವುದರ ಜೊತೆಗೆ, ಕಾಯಿಲೆಯಿಂದ ಜಾಗೃತರಾಗಿರುವಂತೆ ನಾಮಫಲಕ ಪ್ರದರ್ಶಿಸಿದರು. ಶಿಕ್ಷಕ ವೃಂದ ಭಾಗವಹಿಸಿದ್ದರು.