ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

Rashmi Kasaragodu
Updated On : 11 Jun 2013, 12:27 pm

ಕ.ಪ್ರ.ವಾರ್ತೆ   ಮೈಸೂರು   ಜೂ. 10
ಸಂಸದ ಎಚ್. ವಿಶ್ವನಾಥ್ ಅವರು ಸೋಮವಾರ ನಗರ ಪಾಲಿಕೆಯ 43ನೇ ವಾರ್ಡ್ನಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪಾಲಿಕೆ ಸದಸ್ಯ ಸುಹೇಲ್ ಬೇಗ್ ಅವರ ಕಚೇರಿ ಉದ್ಘಾಟನಾ ಸಮಾರಂಭದ ಬಳಿಕ ಸುತ್ತಮುತ್ತಲ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದರು.
ಮನೆ- ಮನೆಗೆ ತೆರಳಿ ಅವರು ಸಾರ್ವಜನಿಕರ ಪ್ರಮುಖ ಸಮಸ್ಯೆಗಳನ್ನು ವಿಚಾರಿಸಿದರು. ನಂತರ ಅಹವಾಲಿನ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಮುಖವಾಗಿ ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಮಾಸಾಶನಗಳ ಕುರಿತು ಹೆಚ್ಚು ಮನವಿಗಳು ಸಲ್ಲಿಕೆಯಾಯಿತು.
ವಾರ್ಡ್ ನಂ. 39, 40, 42 ಮತ್ತು 43ನೇ ವಾರ್ಡ್ನಲ್ಲಿ ಸೋಮವಾರ ಸಂಸದ ವಿಶ್ವನಾಥ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಬೇಕಿತ್ತು. ಆದರೆ, ವಿಧಾನಸಭಾ ಅಧಿವೇಶನದ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ತನ್ವೀರ್ಸೇಠ್ ಅವರು ಇಲ್ಲ ಎಂಬ ಕಾರಣಕ್ಕೆ ಕೇವಲ 43ನೇ ವಾರ್ಡ್ನಲ್ಲಿ ಮಾತ್ರ ಅಹವಾಲು ಸ್ವೀಕರಿಸಿದರು.
ಕಚೇರಿ ಉದ್ಘಾಟನೆ: ಪಾಲಿಕೆ ಸದಸ್ಯ ಸುಹೇಲ್ ಬೇಗ್ ಅವರ ಕಚೇರಿಯನ್ನು ಪತ್ರಿಕೋದ್ಯಮಿ ಕೆ.ಬಿ. ಗಣಪತಿ ಉದ್ಘಾಟಿಸಿದರು. ಸಂಸದ ಎಚ್. ವಿಶ್ವನಾಥ್, ಆರ್. ರಘು, ಶೌಕತ್ ಅಲಿ ಖಾನ್, ಡಿಸಿಪಿ ಬಸವರಾಜ ಮಾಲಗತ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement