ಅಕ್ರಮ ಮರಳು ವಶ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಜೂ. 11
ತಾಲೂಕಿನ ಹೈರಿಗೆ ಗ್ರಾಮದ ಕಪಿಲಾ ನದಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ತಹಸೀಲ್ದಾರ್ ಕೃಷ್ಣ ಹಾಗೂ ರೆವಿನ್ಯೂ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಸ್ಥಳದಲ್ಲಿದ್ದ ಮೂರು ಟ್ರ್ಯಾಕ್ಟರ್, ಒಂದು ಟಿಲ್ಲರ್ ಹಾಗೂ ಸುಮಾರು 15 ರಿಂದ 20 ಟ್ರ್ಯಾಕ್ಟರ್ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಬಂಡಿಜಾಡು ಬಳಿಯಲ್ಲಿ ನಿರಂತರವಾಗಿ ಕಳೆದ ಮೂರು ತಿಂಗಳಿಂದಲೂ ಯಾವುದೆ ಅಧಿಕಾರಿಗಳ ಭಯ ಇಲ್ಲದೆ, ನಿರಾತಂಕವಾಗಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆ ಮಂಗಳವಾರ ಬೆಳಗಿನ ಜಾವ ತಹಸೀಲ್ದಾರ್ ಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಕಸಬಾ ಆರ್ಐ ರವಿಚಂದ್ರ, ಹಂಪಾಪುರ ಆರ್ಐ ಮಹದೇವಯ್ಯ, ವಿಎಗಳಾದ ಮಹೇಶ್, ಚನ್ನಕೇಶವ, ಜಗದೀಶ್, ಸಿದ್ದರಾಮೇಗೌಡ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.