ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಿತ್ತೂರಲ್ಲಿ ಡೆಂಘೀ, ಚಿಕೂನ್ಗುನ್ಯಾ ಜಾಗೃತಿ ಜಾಥಾ

Rashmi Kasaragodu
Updated On : 12 Jun 2013, 12:10 pm

ಕ.ಪ್ರ.ವಾರ್ತೆ   ಕಿತ್ತೂರು   ಜೂ. 11
ಡೆಂಘೀ, ಚಿಕೂನ್ಗುನ್ಯಾ ಮತ್ತು ಮಲೇರಿಯಾದಂತಹ ಕಾಯಿಲೆಗಳು ಹರಡಲು ಶುಚಿತ್ವದ ಕೊರತೆಯೆ ಪ್ರಮುಖ ಕಾರಣವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.
ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಅವರಣದಲ್ಲಿ ಆರೋಗ್ಯ ಇಲಾಖೆ ಗ್ರಾಮದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಏರ್ಪಡಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಜನತೆ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡುವ ಮೂಲಕ ಇಂತಹ ಕಾಯಿಲೆಗಳು ಹರಡದಂತೆ ತಡೆಯಬಹುದು ಎಂದು ತಿಳಿಸಿದರು.
ಗ್ರಾಮೀಣ ಪರಿಸರದಲ್ಲಿ ಸಹಜವಾಗಿಯೆ ಶುಚಿತ್ವದ ಅಭಾವವಿದ್ದು, ಸರ್ಕಾರ ವಿವಿಧ ಯೋಜನೆಗಳ ಮುಖಾಂತರ ಲಕ್ಷಾಂತರ ರು. ಖರ್ಚು ಮಾಡುತ್ತಿದ್ದರೂ ಸಮುದಾಯ ಜಾಗೃತವಾಗದ ಹೊರತು, ಯಾವುದೆ ಪ್ರಯೋಜನವಾಗುವುದಿಲ್ಲ. ಅಲ್ಲದೆ, ಪ್ರತಿ ಮನೆಗಳಲ್ಲಿ ಶೌಚಾಲಯ, ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡುವುದರ ಜೊತೆಗೆ ಪರಿಸರ ಶುಚಿತ್ವ ಕಾಪಾಡಬೇಕು ಎಂದು ಹೇಳಿದರು.
ಗ್ರಾಮದ ಶಾಲಾ ಮಕ್ಕಳು ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ, ಡೆಂಘೀ ನಿಯಂತ್ರಣದ ಬಗೆಗೆ ಅರಿವು ಮೂಡಿಸಿದರು. ವಿವೇಕಾನಂದ ಯೂತ್ ಮೂವ್ಮೆಂಟ್ ಶಿವಣ್ಣ, ಆಯಿಷಾ ಭಾನು, ಆರೋಗ್ಯ ಸಹಾಯಕ ಶಿವನಂಜಯ್ಯ, ಶಾಲಾ ಮುಖ್ಯೋಪಾಧ್ಯಾಯರಾದ ರಾಜೇಗೌಡ, ಶಿಕ್ಷಕಿರಾದ ರೂಪಾ, ಕುಮುದ, ಮಹದೇವಮ್ಮ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement