ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರಿಗೆ ತರಬೇತಿ ಕಾರ್ಯಾಗಾರ

Rashmi Kasaragodu
Updated On : 12 Jun 2013, 12:11 pm

ಕ.ಪ್ರ.ವಾರ್ತೆ   ಎಚ್.ಡಿ.ಕೋಟೆ   ಜೂ. 11
ತಾಲೂಕಿನ ಅಂತರಸಂತೆ ಹೋಬಳಿ ಮಟ್ಟದ ಅನುವುಗಾರರ ಮತ್ತು ಪ್ರಗತಿ ಪರ ರೈತರ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಜಿಪಂ ಸದಸ್ಯ ಎಚ್.ಸಿ. ಮಂಜುನಾಥ್ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ರೈತರಿಗೆ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಬೆಳೆ ಬೆಳೆಯುವುದರ ಬಗ್ಗೆ ಮಾಹಿತಿ ನೀಡಿದರು.
ತಾಪಂ ಸದಸ್ಯ ಮಹೇಂದ್ರ ಮಾತನಾಡಿ, ಮಣ್ಣಿನ ಫಲವತ್ತತೆಯ ಬಗ್ಗೆ ತಿಳಿಸಿದರು.
ತಾಪಂ ಸದಸ್ಯ ಮಹದೇವಪ್ಪ ಮಾತನಾಡಿದರು. ನಾಗೇನಹಳ್ಳಿ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾಧಿಕಾರಿಗಳಾದ ಶಿವಸ್ವಾಮಿ ಬಾಳೆ, ಶುಂಠಿ, ಅರಿಶಿಣ, ಹತ್ತಿ, ಬೆಳೆಗಳಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಕುವುದು ಹಾಗೂ ಮಣ್ಣು ಪರೀಕ್ಷೆಯು ಅತಿ ಮುಖ್ಯ ಎಂದು ರೈತರಿಗೆ ಸಲಹೆ ನೀಡಿದರು. ಚನ್ನಪ್ಪ ಮಾತನಾಡಿ, ಜೈವಿಕ ಗೊಬ್ಬರದ ಬಗ್ಗೆ ಹಾಗೂ ಸಸ್ಯ ಔಷಧಿಗಳಾದ ಬೆಳ್ಳುಳ್ಳಿ ಕಷಾಯ ತಯಾರಿಕೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ದೇವನಾಥ್, ನೋಡಲ್ ಅಧಿಕಾರಿ ಸಾವಿತ್ರಿ ಜಾದವ್, ತಾಂತ್ರಿಕ ಅಧಿಕಾರಿ ಹರೀಶ್, ಅನುವುಗಾರರು, ರೈತ ಸಮೂಹ ಭಾಗವಹಿಸಿದ್ದರು. ನಾಗರಾಜು ಸ್ವಾಗತಿಸಿದರು. ನಾಗರತ್ನಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement