ಶಿಕ್ಷಕರ ಪತ್ತಿನ ಸಂಘಕ್ಕೆ ಆಯ್ಕೆ
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಆರ್. ನಾರಾಯಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಗೌರವಾಧ್ಯಕ್ಷರಾದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ರಾಮಲಿಂಗು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಎಲ್ಲ ನಿರ್ದೇಶಕರು ಸರ್ವಾನುಮತದಿಂದ ನಾರಾಯಣ ಅವರನ್ನು ಆಯ್ಕೆಮಾಡಿದರು.
ನಾಳೆ ಆರೋಗ್ಯ ಉಚಿತ ತಪಾಸಣೆ
ಮೈಸೂರು: ನಾರಾಯಣ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯು ವಾಜಪೇಯಿ ಆರೋಗ್ಯಶ್ರೀ ಸಹಯೋಗದೊಂದಿಗೆ ಜೂ. 13ರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದೆ.
ಪ್ರಾತ್ಯಕ್ಷಿಕಾ ಶಿಬಿರ 16ರಿಂದ
ಮೈಸೂರು: ಕುವೆಂಪುನಗರದ ಚೈತನ್ಯ ಧ್ಯಾನ ಕೇಂದ್ರದ ವತಿಯಿಂದ ಜೂ. 16ರ ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ಕೇಂದ್ರದಲ್ಲಿ ಶಕ್ತಿಶಾಲಿ ಸುಪ್ತಮನಸ್ಸನ್ನು ಜಾಗೃತಗೊಳಿಸುವ ವಿಧಾನ, ಸ್ವಯಂಸಲಹೆ ಹಾಗೂ ಟೆಲಿಪತಿ ಕುರಿತು ಪ್ರಾತ್ಯಕ್ಷಿಕಾ ಶಿಬಿರ ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9844424727 ಸಂಪರ್ಕಿಸಿ.
ಇಬ್ಬರಿಗೆ ಡಾಕ್ಟರೇಟ್
ಮೈಸೂರು: ಡಾ.ಎಂ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಚ್.ಇ. ಹರೀಶ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ತತ್ವಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.ಡಾ. ಪುಟ್ಟಯ್ಯ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಚ್. ಶ್ರೀಧರ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಇತಿಹಾಸ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ.