17ಕ್ಕೆ ಗ್ರೀನ್ ಬಡ್ಸ್ ಕಂಪನಿ ವಿರುದ್ಧ ಪ್ರತಿಭಟನೆ
ಮೈಸೂರು: ಗ್ರೀನ್ ಬಡ್ಸ್ ಎಂಬ ನೈಸರ್ಗಿಕ ಸಂಸ್ಥೆಯು ಅವಿದ್ಯಾವಂತರಿಗೆ ಉದ್ಯೋಗ ನೀಡುವ ನೆಪದಲ್ಲಿ ವಂಚಿಸುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯು ಜೂ. 17ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಮೊದಲು ನೈಸರ್ಗಿಕ ಸಂಸ್ಥೆಯಾಗಿದ್ದ ಗ್ರೀನ್ ಬಡ್ಸ್ ಈಗ ಫೈನಾನ್ಸ್ ಸಂಸ್ಥೆಯಾಗಿ ರೂಪಗೊಂಡಿದೆ. ಹಣದ ಆಸೆಯೊಡ್ಡಿ ಜನರಿಗೆ ಅನೇಕ ವಿಶೇಷ ಯೋಜನೆಗಳ ಹೆಸರಿನಲ್ಲಿ ವಂಚಿಸುತ್ತಿದೆ. ಕಂಪನಿಯ ವ್ಯವಸ್ಥಾಪಕರಾದ ರವೀಂದ್ರನಾಥ್, ಗಾಯತ್ರಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಸಂಸ ನಗರ ಸಂಚಾಲಕ ಗಂಗಾಧರ್, ಖಜಾಂಚಿ ರಾಮಚಂದ್ರ, ಸಂಘಟನಾ ಸಂಚಾಲಕ ಕೃಷ್ಣ ಅಶೋಕಪುರಂ ಒತ್ತಾಯಿಸಿದ್ದಾರೆ.