ಇಳುವರಿ ಹೆಚ್ಚಿಸುವುದೇ 'ಭೂಚೇತನ' ಉದ್ದೇಶ
ಕ.ಪ್ರ.ವಾರ್ತೆ ಹುಣಸೂರು ಜೂ. 12
ಭೂಮಿಯಲ್ಲಿ ಬರಿದಾಗಿರುವ ಪೋಷಕಾಂಶ ಸಂರಕ್ಷಿಸಿ. ಬೇಸಾಯದಲ್ಲಿ ಶೇ. 20ರಷ್ಟು ಇಳುವರಿ ಹೆಚ್ಚಿಸುವುದು ಭೂಚೇತನ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಕೃಷಿ ತಜ್ಞ ಡಾ. ಗೋವಿಂದರಾಜ್ ಹೇಳಿದರು.
ತಾಲೂಕಿನ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಭೂ ಚೇತನ ಯೋಜನೆಯ ಅಬ್ಬೂರು ಗುಚ್ಛ ಗ್ರಾಮದ ಮಾಹಿತಿ ಹಾಗೂ ರೈತರು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಹಾಗೂ ಅನುವುಗಾರರ ಸಭೆಯಲ್ಲಿ ಮಾತನಾಡಿದರು.
1960ರ ದಶಕದಲ್ಲಿ ಹಸಿರು ಕ್ರಾಂತಿಯು ಕೃಷಿಯಲ್ಲಿ ಹೆಚ್ಚು ಬೆಳೆ ಬೆಳೆಯಲು ಇಳುವರಿ ಪಡೆಯಲು ಉತ್ತೇಜಿಸಲಾಗಿತ್ತು. ಇದರಿಂದ ಭೂಮಿಯಲ್ಲಿ ಉತ್ತಮ ಬೆಳೆ ಬಂದು ಹೆಚ್ಚು ಇಳವರಿ ಪಡೆಯಲು ಆಧುನಿಕ ಬೇಸಾಯ, ರಾಸಾಯನಿಕ ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಉತ್ತಮ ಇಳುವರಿ ಪಡೆಯಲಾಗಿದ್ದು, ಅದರ ಪರಿಣಾಮ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಅನುವುಗಾರರು ರೈತರ ಮನವೊಲಿಸಿ ಸಾವಯವ ಕೃಷಿಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ಹನಗೋಡು ಸಹಾಯಕ ಕೃಷಿ ಅಧಿಕಾರಿ ವೆಂಕಟಾಚಲಪತಿ, ಕೃಷಿ ಮಾಹಿತಿದಾರ ಸತೀಶ್, ಮುಖಂಡರಾದ ಪಿ.ಕೆ. ರಾಮ, ಕೆ.ಟಿ. ಪುಟ್ಟರಾಜೇಗೌಡ, ಯಶೋದಕುಮಾರ್, ನಿಂಗರಾಜು, ನಾಗರಾಜಶೆಟ್ಟಿ, ಪ್ರಗತಿಪರ ರೈತರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ರೈತ ಅನುವುಗಾರರು ಭಾಗವಹಿಸಿದ್ದರು.