ಎ.ಜೆ. ಬ್ಲಾಕ್ನಲ್ಲಿ ಕಣ್ಣಿನ ತಪಾಸಣೆ ಶಿಬಿರ
ಮೈಸೂರು: ಗ್ರೀನ್ ಗ್ರೂಪ್ ಸಂಸ್ಥೆ ಹಾಗೂ ಆಪ್ಟಿಸ್ ಆಸ್ಪತ್ರೆ ವತಿಯಿಂದ ಹಳೇ ಜಲಪುರಿ ಎ.ಜೆ. ಬ್ಲಾಕ್ನಲ್ಲಿ ಕಣ್ಣಿನ ತಪಾಸಣೆಯ ಉಚಿತ ಶಿಬಿರ ಏರ್ಪಡಿಸಲಾಗಿತ್ತು.
ಪಾಲಿಕೆ ಸದಸ್ಯ ಪುಟ್ಟಲಿಂಗು ಶಿಬಿರ ಉದ್ಘಾಟಿಸಿದರು. ತಪಾಸಣೆ ಬಳಿಕ 10 ಮಂದಿಗೆ ಕನ್ನಡಕವನ್ನು ಉಚಿತವಾಗಿ ನೀಡಲಾಯಿತು.
ಕಣ್ಣನ ತೊಂದರೆಯುಳ್ಳ 5 ಮಂದಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸುವ ಜವಾಬ್ದಾರಿಯನ್ನು ಗ್ರೀನ್ ಗ್ರೂಪ್ಸ್ ಸಂಸ್ಥೆ ವಹಿಸಿಕೊಂಡಿತ್ತು.
ಎ.ಜೆ. ಬ್ಲಾಕ್ ಸಮುದಾಯದ ಅಧ್ಯಕ್ಷ ಸುರೇಶ್, ಆಪ್ಟಿಸ್ ಆಸ್ಪತ್ರೆಯ ಡಾ. ತಾಹೆರಾ, ಡಾ. ಮಂಜುನಾಥ್, ಸಂಸ್ಥೆ ಅಧ್ಯಕ್ಷ ಮಹೇದವಸ್ವಾಮಿ, ಉಪಾಧ್ಯಕ್ಷ ಎನ್. ಮನು ಇದ್ದರು.