ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಗ್ನಲ್ ಕಂಬ ಸ್ಥಳಾಂತರಿಸಿ

Rashmi Kasaragodu
Updated On : 12 Jun 2013, 11:42 am

ಮೈಸೂರು: ಇಲ್ಲಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆ ಹಾಗೂ ಉದಯರವಿ ರಸ್ತೆಗೆ ಹೊಂದಿಕೊಂಡಂತಿರುವ ಡಾ.ಸಿ. ಅಶ್ವತ್ ವೃತ್ತದಲ್ಲಿ ರಸ್ತೆಯ ಮಧ್ಯಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಕಂಬವನ್ನು ಸ್ಥಳಾಂತರಿಸುವಂತೆ ನಗರಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಪೊಲೀಸ್ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ. ಈ ಕಂಬವು ರಸ್ತೆಯ ಮಧ್ಯಭಾಗದಲ್ಲೆ ಉಳಿದಿರುವುದರಿಂದ ವಾಹನ ಸವಾರರಿಗೆ ಬಹಳಷ್ಟು ತೊಂದೆಯಾಗಿದ್ದು, ಅಪಘಾತ ಉಂಟಾಗುವ ಸಂಭವವಿದೆ. ಆದ್ದರಿಂದ ಸಿಗ್ನಲ್ ಕಂಬವನ್ನು ರಸ್ತೆಯ ಅಂಚಿಗೆ ಸ್ಥಳಾಂತರಿಸಿ, ವಾಹನ ಸವಾರರಿಗೆ ಅನುಕೂಲ ಮಾಡಿಕೊಂಡುವಂತೆ ಕೋರಿದ್ದಾರೆ.
ಪಾಲಿಟೆಕ್ನಿಕ್ನಲ್ಲಿ ಉಚಿತ ತರಬೇತಿ
ಸಮುದಾಯ ಪಾಲಿಟೆಕ್ನಿಕ್ ಯೋಜನೆಯಡಿ ಉದಯಗಿರಿ ಎಂ.ಜಿ. ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ. ಬನುಮಯ್ಯ ಪಾಲಿಟೆಕ್ನಿಕ್ನಲ್ಲಿ ನಿರುದ್ಯೋಗಿ ಯುವಕರು, ಮಹಿಳೆಯರು, ಪ. ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳು, ವಿಧವೆಯರು ಮತ್ತು ಅಂಗವಿಕಲರಿಗೆ ವಿವಿಧ ವಿಷಯಗಳ ಬಗ್ಗೆ ಜು. 1ರಿಂದ ಉಚಿತ ತರಬೇತಿ ನೀಡಲಿದೆ. ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಜೂ. 25 ಕೊನೆಯ ದಿನಾಂಕ.
ಫ್ಯಾಷನ್ ತರಬೇತಿ
ಡಯಾನ ಫ್ಯಾಷನ್ ಸ್ಕೂಲ್ನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾದ ಅಥವಾ ಫೇಲಾದ ಮಹಿಳೆಯರಿಗೆ ಫ್ಯಾಷನ್ ತಂತ್ರಜ್ಞಾನ ಕುರಿತ ವಿವಿಧ ತರಬೇತಿ ನೀಡಲಿದ್ದು, ಆಸಕ್ತರು ಮೊ. 8088808840 ಸಂಪರ್ಕಿಸಬಹುದು.
ಉಪನ್ಯಾಸ
ಯಾದವಗಿರಿಯ ರಾಮಕೃಷ್ಣ ಆಶ್ರಮದ ವತಿಯಿಂದ ಜೂ. 15ರ ಸಂಜೆ 6ಕ್ಕೆ ಸ್ವಾಮಿ ಮಹೇಶಾತ್ಮಾನಂದಜಿ ಅವರು ದೈನಂದಿನ ಜೀವನದಲ್ಲಿ ಭಗವದ್ಗೀತಾ ವಿಷಯದ ಬಗ್ಗೆ ಮತ್ತು ಜೂ. 16ರ ಸಂಜೆ 6ಕ್ಕೆ ಸ್ವಾಮಿ ವೀರೇಶಾನಂದಜಿ ಅವರು ಶ್ರೀಮದ್ಭಾಗವತಃ ದಶಮಸ್ಕಂದ ವಿಷಯದ ಬಗ್ಗೆ ಹಾಗೂ ಜೂ. 18ರ ಸಂಜೆ 6ಕ್ಕೆ ಸ್ವಾಮಿ ವೀರೇಶಾನಂದಜಿ ಅವರು ಈಶಾವಾಸ್ಯೋಪನಿಷತ್ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಗೋಕುಲಂ 3ನೇ ಹಂತದ ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂ. 14ರ ಸಂಜೆ 5.30 ಕ್ಕೆ ಶ್ರೀ ಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀಮದ್ ಭಗವದ್ಗೀತಾ ಕುರಿತು ಶ್ರೀರಾಮಕೃಷ್ಣಾಶ್ರಮದ ಸ್ವಾಮಿ ಕರುಣಾಕರಾನಂದಜೀ ಉಪನ್ಯಾಸ ನೀಡುವರು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಶ್ರೀಧರರಾಜೇ ಅರಸ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement