ಕೃಷ್ಣರಾಜೇಂದ್ರ ತಂಡಕ್ಕೆ ಜಯ
ಮೈಸೂರು: ತೇಜಸ್ ಅವರ ಮಾರಕ ದಾಳಿಯಿಂದ ಕೃಷ್ಣರಾಜೇಂದ್ರ ಸ್ಪೋರ್ಟ್ಸ್ ಕ್ಲಬ್ ತಂಡವು, ಮೈಸೂರು ಜಿಮ್ಖಾನ ತಂಡದ ವಿರುದ್ಧ 1 ವಿಕೆಟ್ ಜಯ ದಾಖಲಿಸಿದೆ. ಕೆ.ಆರ್. ನಗರದ ಡಿವೈಎಸ್ಎಸ್ ಮೈದಾನದಲ್ಲಿ ನಡೆದ ಗೋಪಾಲಸ್ವಾಮಿ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೃಷ್ಣರಾಜೇಂದ್ರ ತಂಡದ ತೇಜಸ್ ಕೇವಲ 42 ರನ್ ನೀಡಿ ಐದು ವಿಕೆಟ್ ಕಬಳಿಸಿ, ಜಿಮ್ಖಾನ ತಂಡ ಕಟ್ಟಿ ಹಾಕಿದರು. ತಂಡದ ಪರ ರವೀಂದ್ರ (36) ಮತ್ತು ಪೂರ್ಣಚಂದ್ರ (35) ರನ್ ಕಲೆಹಾಕಿದರು. ಮೊದಲು ಬ್ಯಾಟ್ ಮಾಡಿದ ಜಿಮ್ಖಾನ 42.5 ಓವರ್ಗಳಲ್ಲಿ 161 ರನ್ ಪಡೆಯಿತು.
ವಿವಿ ಸಂಜೆ ಕಾಲೇಜಿಗೆ ಪ್ರವೇಶಾತಿ
ಮೈಸೂರು: 2013-14 ನೇ ಸಾಲಿನ ಬಿ.ಎ, ಬಿ.ಕಾಂ, ಮತ್ತು ಬಿಬಿಎಂ ತರಗತಿ ಪ್ರವೇಶಕ್ಕೆ ಮೈಸೂರು ವಿವಿಯ ಸಂಜೆ ಕಾಲೇಜಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಉತ್ತಮ ಬೋಧನಾ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯ, ಕ್ರೀಡೆ, ಎನ್ಸಿಸಿ ಹಾಗೂ ಎನ್ಎಸ್ಎಸ್ ಮತ್ತಿತರ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶವಿದೆ ಆಸಕ್ತರು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾಲೇಜಿನ ಕಚೇರಿ ಸಂಪರ್ಕಿಸಿ 156 ಅರ್ಜಿ ಶುಲ್ಕ ಪಾವತಿ ಅರ್ಜಿ ಪಡೆದು ಸಲ್ಲಿಸುವಂತೆ ಪ್ರಾಂಶುಪಾಲರು ಕೋರಿದ್ದಾರೆ.