ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದುಡಿವ ಮಕ್ಕಳ ಶಾಲೆಗೆ ಸೇರಿಸಿದರು

Rashmi Kasaragodu
Updated On : 14 Jun 2013, 12:08 pm

ಕ.ಪ್ರ.ವಾರ್ತೆ   ಮೈಸೂರು   ಜೂ. 13
ನಗರದ ಚೈಲ್ಡ್ಲೈನ್ ಇಂಡಿಯಾ ಫೌಂಡೇಶನ್ ಸಂಸ್ಥೆಯು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಬುಧವಾರ ಶಾಲೆಬಿಟ್ಟ ಮಕ್ಕಳಿಂದ ಅಕ್ಷರ ಬರೆಸುವ ಮೂಲಕ ಆಚರಿಸಿತು.
ಇಲ್ಲಿನ ಸಾತಗಳ್ಳಿ ಕೊಳಚೆ ಪ್ರದೇಶದ ಶಾಲೆಯ ಮುಖ್ಯೋಪಾಧ್ಯಾಯರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಳಚೆ ಪ್ರದೇಶದಲ್ಲಿ ಬೀದಿ ನಾಟಕದ ಮೂಲಕ ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಅರಿವು ಮೂಡಿಸಿದರು. ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ ಐದು ಮಕ್ಕಳನ್ನು ಅಲ್ಲಿನ ಸರ್ಕಾರಿ ಶಾಲೆಗೆ ದಾಖಲು ಮಾಡಿಸಿದ ಸಂಘಟನೆ ಸದಸ್ಯರು ಈ ಅನಿಷ್ಟ ಪದ್ಧತಿಯನ್ನು ತಡೆದು ಮಕ್ಕಳ ಸ್ನೇಹಿ ಸಮಾಜ ನಿರ್ಮಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೊಳಚೆ ಪ್ರದೇಶದ ಸಾರ್ವಜನಿಕರು, ಎಸ್ಡಿಎಂಸಿ ಸದಸ್ಯರು, ಮಹಿಳಾ ಸಂಘದ ಸದಸ್ಯರು, ಶಾಲಾ ಶಿಕ್ಷಕರು ಮತ್ತು 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕಿ ಲಿಲ್ಲಿ ಇದ್ದರು.
ಸಿಕ್ರಂ ಸಂಘಟನೆ: ಉಳ್ಳವರು ಮತ್ತು ನಿರ್ಗತಿಕರು ಎಂಬ ತಾರತಮ್ಯದೊಂದಿಗೆ ಶೈಕ್ಷಣಿಕ ವ್ಯವಸ್ಥೆ ದುರಂತದ ಹಾದಿ ಹಿಡಿದಿದ್ದು, ಸೂಕ್ತ ಹಾಗೂ ಸಮಗ್ರ ಶಿಕ್ಷಣ ನೀತಿ ಜಾರಿಯಾಗಬೇಕು ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು. ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ನಗರದ ಬುದ್ಧ ವಿಹಾರದಲ್ಲಿ ಬದುಕು ಟ್ರಸ್ಟ್, ಸಿಎಸಿಎಲ್ ಹಾಗೂ ಸಿಕ್ರಂ ಜಿಲ್ಲಾ ಮಾನವ ಹಕ್ಕುಗಳ ಕೇಂದ್ರ ನಡೆದ ಬಾಲಕಾರ್ಮಿಕ ವಿರೋಧಿ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಂವಿಧಾನದ ಪ್ರಕಾರ ಸಮಾಜದ ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗಬೇಕು. ಅದು ಸರ್ಕಾರದ ಜವಾಬ್ದಾರಿಯೂ ಹೌದು ಎಂದರು.
ಬದುಕು ಟ್ರಸ್ಟ್ನ ಧನಂಜಯ್ ಮಾತನಾಡಿ, ಮಕ್ಕಳು ಮನೆಯ ದೀಪ. ಅಂತಹ ಭವಿಷ್ಯದ ಪ್ರಜೆಗಳಾಗುವ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಬೆಳಕಾಗಬೇಕಿದೆ ಎಂದರು. ಕಾರ್ಯಕ್ರಮ ಸಂಯೋಜಕ ಸಿಕ್ರಂ ಪ್ರಸನ್ನ ಮಾತನಾಡಿ, ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ನಮ್ಮೆಲ್ಲರ ಹೊಣೆ. ಯಾವುದೇ ಮಕ್ಕಳ ಶಿಕ್ಷಣ ಸಮಸ್ಯೆಯನ್ನು ಶಿಕ್ಷಕರ ಗಮನಕ್ಕೆ ತರಬೇಕು ಎಂದರು. ಸ್ವೀಡನ್ ದೇಶದ ಸಮಾಜ ಕಾರ್ಯಕರ್ತೆ ಸಾರಾ ಕೆಲ್ಲಿಂಗ್ಡ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗಣ್ಣ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಯೋಗರಾಜ್, ಇಂದಿರಾ, ಗೋಪಾಲಕೃಷ್ಣ, ಸಿದ್ದಯ್ಯ, ಶಶಿರೇಖ, ರವಿಶಂಕರ್, ವಸತಿ ಶಾಲೆ ಸಂಚಾಲಕ ಹನುಮಂತಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement