ಯಾತ್ರಿಕರಿಗೆ ಹಿತೈಷಿಗಳ ಬೀಳ್ಕೊಡುಗೆ
ಮೈಸೂರು: ಬಜ್ಮೆ ಗೌಸ್ ಅಜಾಮ್ ಮತ್ತು ಬಾಗ್ದಾದ್ಗೆ ತೆರಳಿದ ಸೈಯದ್ ಖುತ್ಬುದ್ದೀನ್ ಮತ್ತು ಇತರೆ ಯಾತ್ರಿಕರಿಗೆ ಹಿತೈಷಿಗಳು, ಮುಖಂಡರು ಬೀಳ್ಕೊಟ್ಟರು. ಬನ್ನಿಮಂಟಪದ ನಿವಾಸದಲ್ಲಿ ನಡೆದ ಈ ಸಮಾರಂಭದಲ್ಲಿ ಮಕ್ಬೂಲ್ ಅಹಮದ್ ನಿಜಾಮಿ, ತನ್ಜೀಮ್ ಅಹಲ ಸುನ್ನತೋ ಜಮತ್ ಅವರು ಫತಾಖಾನಿ ಹಾಗೂ ಮೊಹಮ್ಮದ್ ಉಸ್ಮಾನ್ ಷರೀಫ್ ದುವಾ ಷರೀಫ್ ಓದಿದರು. ನಗರಪಾಲಿಕೆ ಸದಸ್ಯ ಖಮ್ರುದ್ದೀನ್, ತನ್ಜೀಮ್ ಉಲ್ಮಾ ಅಹಲ ಸುನ್ನತೋ ಜಮಾತ್ ಅಧ್ಯಕ್ಷ ಇಮ್ರಾನ್ಖಾನ್, ಅಬ್ದುಲ್ ಸಲಾಂ, ಗೌಸ್ ಪೀರಾನ್, ಮತೀನ್, ಸಮ್ನುನ್, ಮೈನಾರಿಟಿ ಕೋ-ಆಪ್ ಬ್ಯಾಂಕ್ ನಿರ್ದೇಶಕ ನೂರುಲ್ಲಾ ಷರೀಫ್, ಮಿರ್ಜಾ ಜಂಷೀದ್ ಬೇಗ್ ಅಶ್ರಫಿ ಭಾಗವಹಿಸಿದ್ದರು.