ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಿಎಂ ಅಖಿಲೇಶ್ಗೆ ಇಂದು ಸ್ವಾಗತ

Rashmi Kasaragodu
Updated On : 14 Jun 2013, 12:09 pm

ಮೈಸೂರು: ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಜೂ.14ರ ಮಧ್ಯಾಹ್ನ 1.30ಕ್ಕೆ ನಗರಕ್ಕೆ ಆಗಮಿಸಲಿದ್ದು, ಮೈಸೂರು ಯಾದವ (ಗೊಲ್ಲ) ಸಂಘದ ವತಿಯಿಂದ ಟೋಲ್ಗೇಟ್ ಬಳಿ ಸ್ವಾಗತಿಸಲಾಗುವುದು ಎಂದು ನಗರಪಾಲಿಕೆ ಸದಸ್ಯ ಡಿ.ನಾಗಭೂಷಣ್ ಹೇಳಿದ್ದಾರೆ. ಯಾದವ ಜನಾಂಗದವರು ಆಗಮಿಸುವಂತೆ  ಕೋರಿದ್ದಾರೆ.
ಇಂದು ಸಚಿವ ಸೊರಕೆ ಪ್ರವಾಸ
ಮೈಸೂರು: ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಅವರು ಜೂ.14ರ ಬೆಳಗ್ಗೆ 10.30ಕ್ಕೆ ನಗರಕ್ಕೆ ಆಗಮಿಸುವರು. ಬೆಳಗ್ಗೆ 11ಕ್ಕೆ ನಗರಪಾಲಿಕೆ ಸಭಾಂಗಣದಲ್ಲಿ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 2ಕ್ಕೆ ಎಂಡಿಎ ಸಭಾಂಗಣದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3ಕ್ಕೆ ನರ್ಮ್ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪರಿವೀಕ್ಷಣೆ ಮಾಡುವರು. ಸಂಜೆ 5ಕ್ಕೆ ಜಯಲಕ್ಷ್ಮೀಪುರಂದಲ್ಲಿರುವ ದಿ. ಆರ್.ಕೆ. ನಾರಾಯಣ ಅವರ ಸ್ವಗೃಹದ ಪಾರಂಪರಿಕ ಕಟ್ಟಡಕ್ಕೆ ಭೇಟಿ ನೀಡುವರು. ನಂತರ ಸಂಜೆ 6ಕ್ಕೆ ಮಂಗಳೂರಿಗೆ ತೆರಳುವರು.
ಆಶೋದಯದಲ್ಲಿ ಆಧಾರ್ ಘಟಕ
ಮೈಸೂರು: ಅಶೋದಯ ಸಮಿತಿಯು ಸಮುದಾಯದ ಮೂಲಭೂತ ಸೌಲಭ್ಯ ಪಡೆದುಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಘಟಕವನ್ನು ಆಶೋದಯ ಅಕಾಡೆಮಿ ಕಚೇರಿಯಲ್ಲಿ ಸ್ಥಾಪಿಸಿದೆ. ಕೃಷ್ಣಮೂರ್ತಿಪುರಂ ಡಾ. ಅಂಬೇಡ್ಕರ್ ರಸ್ತೆಯಲ್ಲಿರುವ ಆಶೋದಯ ಅಕಾಡೆಮಿಯಲ್ಲಿ ಆಧಾರ್ ಕಾರ್ಡ್ಗೆ ನೋಂದಣಿ ಮಾಡಲಾಗುತ್ತದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬಹುದು. ಜೂ.30 ರವರೆಗೆ ಮಾತ್ರ ಈ ಸೌಲಭ್ಯ ಇರುತ್ತದೆ ಎಂದು ಅಶೋಯದ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಫ್ರೆಂಚ್ ಭಾಷೆ ಕಲಿಕೆ
ಮೈಸೂರು: ದಿ ಮೈಸೂರು ಚಾಪ್ಟರ್ ಅಲಿಯನ್ಸ್ ಫ್ರಾಂಚೈಸಿ ವತಿಯಿಂದ ಜೂ.15 ರಿಂದ ಜಯಲಕ್ಷ್ಮೀಪುರಂ ಮಹಾಜನ ಪದವಿ ಕಾಲೇಜಿನಲ್ಲಿ ಫ್ರೆಂಚ್ ಭಾಷೆ ಕಲಿಕೆ ತರಗತಿ ಪ್ರಾರಂಭಿಸಲಿದೆ. ದೂ. 4000727, ಮೊ. 9663381667 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement