ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆನಂದಸ್ವಾಮಿ ನೇಮಕಕ್ಕೆ ಮನವಿ

Rashmi Kasaragodu
Updated On : 14 Jun 2013, 10:59 am

ಮೈಸೂರು: ಕಾಂಗ್ರೆಸ್ ಮುಖಂಡ ಹರಿಹರ ಆನಂದಸ್ವಾಮಿ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಅಥವಾ ರಾಜ್ಯಮಟ್ಟದ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕೆಂದು ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ಆಗ್ರಹಿಸಿದೆ. ನಾಲ್ಕು ದಶಕಗಳ ಕಾಲದಿಂದ ಆನಂದಸ್ವಾಮಿ ಅವರು ದಲಿತ ಚಳವಳಿಯಲ್ಲಿ ದುಡಿದವರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾದ್ಯಂತ ಚುನಾವಣಾ ಪ್ರಚಾರ ನಡೆಸಿ ಕಾಂಗ್ರೆಸ್ ಗೆಲವಿಗೆ ಕಾರಣರಾಗಿರುವುದರಿಂದ ಸೂಕ್ತ ಅವಕಾಶ ಮಾಡಿಕೊಡುವಂತೆ ವೇದಿಕೆಯ ಅಧ್ಯಕ್ಷ ಕೆ.ವಿ. ದೇವೇಂದ್ರ, ಉಪಾಧ್ಯಕ್ಷ ಸೋಮಯ್ಯ ಮಲೆಯೂರು, ಕಾರ್ಯದರ್ಶಿ ಮಲ್ಲೇಶ್ ಚುಂಚನಹಳ್ಳಿ ಕೋರಿದ್ದಾರೆ.
ಮಹದೇವಸ್ವಾಮಿ ನೇಮಕ
ಮೈಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಕೆ.ಆರ್. ಮೊಹಲ್ಲಾ ಬಸವೇಶ್ವರ ರಸ್ತೆಯ ಎಂ.ಎಚ್. ಮಹದೇವಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
ವಿನ್ಸೆಂಟ್ಗೆ ಡಾಕ್ಟರೇಟ್
ಮೈಸೂರು: ಡಾ.ಎಂ.ವಿ. ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎಂ. ವಿನ್ಸೆಂಟ್ ಅವರು ಸಾದರಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಿದೆ. ವಿನ್ಸೆಂಟ್ ಅವರು ನಗರದ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು.
ಸಂಘಕ್ಕೆ ಆಯ್ಕೆ
ಮೈಸೂರು: ಶಾರದಾದೇವಿ ನಗರ ಹತ್ತಿರದ ಆನಂದನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾಗಿ ಎಂ.ಎನ್. ಕೆಂಪೇಗೌಡ (ಅಧ್ಯಕ್ಷರು), ಎಂ.ಜಿ. ಹರೀಶ್ (ಉಪಾಧ್ಯಕ್ಷರು), ಬಿ. ಪ್ರಕಾಶ್ (ಉಪಾಧ್ಯಕ್ಷರು), ಬಿ. ಪ್ರಕಾಶ್ (ಕಾರ್ಯದರ್ಶಿ), ಶಿವಮಲ್ಲು (ಖಜಾಂಚಿ), ಮಹದೇವಪ್ಪ, ಆರ್. ವನಜಾಕ್ಷಿ, ಎಂ. ನಾರಾಯಣ, ಕೆ.ಎಲ್. ಸತೀಶ್, ಎಸ್. ರಘುನಂದನ್, ಕೆ.ಎಂ. ಪೂಣಚ್ಚ, ಬಿ.ಸಿ. ಬೆಳ್ಳಪ್ಪ, ಕೆ.ಎಲ್. ಸುರೇಶ್ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement