ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಸಾಪ ಸಮ್ಮೇಳನದಲ್ಲಿ ಭಾಗವಹಿಸಲು ಮನವಿ

Rashmi Kasaragodu
Updated On : 14 Jun 2013, 11:02 am

ಕ.ಪ್ರ.ವಾರ್ತೆ   ಎಚ್.ಡಿ.ಕೋಟೆ   ಜೂ. 14
ನಂಜನಗೂಡಿನಲ್ಲಿ ಜೂ.15 ಮತ್ತು 16 ರಂದು ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ಸಂಘ ಸಂಸ್ಥೆ, ಕನ್ನಡ ಅಭಿಮಾನಿಗಳು ಹಾಗೂ ತಾಲೂಕಿನ ಸಮಸ್ತ ಜನತೆ ಭಾಗವಹಿಸುವಂತೆ ತಾಲೂಕು ಕಸಾಪ ಅಧ್ಯಕ್ಷ ಮಹೇಶ್ ಕೋರಿದ್ದಾರೆ.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧಕ್ಕೆ ತಾಲೂಕು ಆಡಳಿತ ಭವನ ಎಂದು ನಾಮಕರಣ ಮಾಡಬೇಕೆಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ತಾಲೂಕಿನ ಗಡಿ ಭಾಗದಲ್ಲಿ ಮೈಸೂರಿನಿಂದ ಬರುವಾಗ ವನಸಿರಿ ನಾಡಿಗೆ ಸ್ವಾಗತ ಎಂಬ ಸ್ವಾಗತ ಕಮಾನು ಮುರಿದು ಬಿದ್ದು, ಸುಮಾರು 5-6 ವರ್ಷಗಳು ಕಳೆದಿದೆ.
ತಾಲೂಕು ಆಡಳಿತ ಅದನ್ನು ದುರಸ್ತಿ ಪಡಿಸಿಲ್ಲ, ಇದು ನಿಜಕ್ಕೂ ತಲೆ ತಗ್ಗಿಸುವ ವಿಷಯವಾಗಿದ್ದು, ಸ್ವಾಗತ ಕಮಾನನ್ನು ಕೂಡಲೆ ಸಿದ್ದಗೊಳಿಸಬೇಕೆಂದು ಒತ್ತಾಯಿಸಿದರು.
ಸಾಹಿತ್ಯ ಪರಿಷತ್ ಸದಸ್ಯರಾದ ನಾರಾಯಣಗೌಡ, ಚಾ. ನಂಜುಂಡಮೂರ್ತಿ, ರಾಮಕೃಷ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement