ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗ್ರಂಥಾಲಯ ಸಿಬ್ಬಂದಿ ಅಮಾನತು

Rashmi Kasaragodu
Updated On : 15 Jun 2013, 12:30 pm

ಮೈಸೂರು: ಕರ್ತವ್ಯಲೋಪ ಎಸಗಿದ ನಗರ ಶಾಖಾ ಗ್ರಂಥಾಲಯದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಇಲ್ಲಿನ ವಿಶ್ವೇಶ್ವರನಗರ ಶಾಖೆಯ ಪ್ರಬಂಧಾರಕ ಸಿದ್ದಯ್ಯ, ಬಸವೇಶ್ವರ ರಸ್ತೆಯ ಗ್ರಂಥಾಲಯ ಶಾಖೆಯ ಪ್ರಬಂಧಾರಕ ಶ್ರೀನಿವಾಸ್ ಮತ್ತು ದಿನಗೂಲಿ ನೌಕರರಾದ ಗಾಯಿತ್ರಿ ಅಮಾನತುಗೊಂಡವರು. ನಗರದ ಎಲ್ಲಾ ಶಾಖಾ ಗ್ರಂಥಾಲಯಗಳು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕರ್ತವ್ಯ ನಿರ್ವಹಿಸಬೇಕು. ಶುಕ್ರವಾರ ನಗರ ಗ್ರಂಥಾಲಯ ಪ್ರಾಧಿಕಾರದ ಉಪ ನಿರ್ದೇಶಕ ಬಿ. ಮಂಜುನಾಥ್ ಅವರು ಗ್ರಂಥಾಲಯಗಳಿಗೆ ದಿಢೀರ್ ಭೇಟಿ ನೀಡಿದಾಗ ಇವರು ಕರ್ತವ್ಯ ನಿರ್ವಹಿಸದೆ ಗ್ರಂಥಾಲಯದ ಬಾಗಿಲು ಮುಚ್ಚಿದ್ದರು. ಇವರ ಬಗೆಗಿನ ವಿಚಾರಣೆ ಕಾಯ್ದಿರಿಸಿ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement