ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಕಳ್ಳ ಗೆಳತಿ ಬೆಂಗಳೂರಿನಲ್ಲಿ ಬಂಧನ

Rashmi Kasaragodu
Updated On : 15 Jun 2013, 12:44 pm

ಹಲಗೂರು: ಸಮೀಪದ ಬೆಳತೂರು ಗ್ರಾಮದ ವಾಸಿ ಅನಿತಾ ಕುಮಾರ್ ಎಂಬವರ ಮನೆಗೆ ಸ್ನೇಹಿತೆಯಾಗಿ ಬಂದು ಬೀರುವಿನಲ್ಲಿದ್ದ 40 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಿಯಾ ಆಲಿಯಾಸ್ ಸಂಧ್ಯಾಳನ್ನು ಹಲಗೂರು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದ ಶ್ರೀಕಂಠೇಗೌಡರ ಮಗಳಾದ ಪ್ರಿಯಾ ಅಲಿಯಾಸ್ ಸಂಧ್ಯಾ ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿ ವಾಸವಾಗಿದ್ದು, ಪೀಣ್ಯಾದಲ್ಲಿರುವ ಮಧು ಪಾರಂ ಮೆಡಿಷನ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಈಕೆ ಇತ್ತೀಚೆಗೆ ತನ್ನ ಸ್ನೇಹಿತೆಯ ಮದುವೆಗೆಂದು ಮಳವಳ್ಳಿ ತಾಲೂಕಿನ ಕಾಗೇಪುರಕ್ಕೆ ಬಂದಿದ್ದಾಳೆ. ಈ ಸಂದರ್ಭದಲ್ಲಿ ಬೆಳತೂರು ಗ್ರಾಮದ ಕುಮಾರ್ರವರ ಪತ್ನಿ ಅನಿತಾರಿಗೂ ಸಂಧ್ಯಾಳಿಗೂ ಪರಿಚಯ ಬೆಳೆದಿದೆ. ಆಗ ಅನಿತಾ ತನ್ನ ಸ್ವಗ್ರಾಮಕ್ಕೆ ಬರುವಂತೆ ಸಂಧ್ಯಾಳನ್ನು ಆಹ್ವಾನಿಸಿದ್ದಾರೆ. ಅನಿತಾ ಮನೆಗೆ ಬಂದು ಎರಡು ದಿನ ವಾಸವಿದ್ದ ಸಂಧ್ಯಾ, ಅನಿತಾ ಮತ್ತು ಕುಮಾರ್ ಇಬ್ಬರೂ ಜಮೀನಿಗೆ ಹೋಗಿದ್ದಾಗ ಬೀರುವಿನ ಬೀಗ ಹಾಕದೆ ಹೋಗಿದ್ದುದನ್ನು ಗಮನಿಸಿ ಅದರಲ್ಲಿದ್ದ ಚಿನ್ನದ ಚೈನು ಹಾಗೂ ಎರಡು ಉಂಗುರ ಸೇರಿ ಒಟ್ಟು 40 ಗ್ರಾಂ ಚಿನ್ನ ಕದ್ದು ಪರಾರಿಯಾಗಿದ್ದಳು.ಮನೆಗೆ ಬಂದ ದಂಪತಿ ಸಂಧ್ಯಾ ಇಲ್ಲದಿದ್ದನ್ನು ನೋಡಿ ಅನುಮಾನಗೊಂಡು ಬೀರುವನ್ನು ಪರೀಕ್ಷಿಸಿದಾಗ ಅಲ್ಲಿದ್ದ ಒಡವೆಗಳು ಕಾಣೆಯಾಗಿದ್ದರಿಂದ ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಎಸ್ಐ ಶಂಕರಯ್ಯ ಹಾಗೂ ಸಿಬ್ಬಂದಿ ಬೆಂಗಳೂರಿನಲ್ಲಿ ಶೋಧ ಕಾರ್ಯ ನಡೆಸಿ ಸಂಧ್ಯಾಳನ್ನು ಬಂಧಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement