ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ದಲಿತರಿಗೆ ನೀಡಿದ್ದ ಭೂಮಿ ಹೋಯ್ತು

Rashmi Kasaragodu
Updated On : 14 Jun 2013, 11:00 am

ಕ.ಪ್ರ.ವಾರ್ತೆ   ಟಿ.ನರಸೀಪುರ   ಜೂ. 14
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ, ದಲಿತ ಸಮುದಾಯದ ನಾಲ್ಕು ಕುಟುಂಬಗಳಿಗೆ ನೀಡಲಾಗಿದ್ದ ಕೃಷಿ ಭೂಮಿಯು ಕೈ ಬಿಟ್ಟು ಹೋಗಿದ್ದರಿಂದ, ಈ ಕುಟುಂಬಗಳ ಜೀವನ ಬೀದಿಪಾಲಾಗಿದೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಿವಕುಮಾರ್ ಹೇಳಿದರು.
ಯಾವುದೇ ಒಂದು ಸರ್ಕಾರ ಕೃಷಿ ಜಮೀನನ್ನು ನಿಗಮದವೊಂದರ ಮೂಲಕ ಖರೀದಿಸಿ ನೀಡುವ ವೇಳೆ ಅಧಿಕಾರಿಗಳು ವಾರಸುದಾರರಿಂದ ಸಮರ್ಪಕವಾದ ದಾಖಲೆ ಪಡೆದುಕೊಂಡು, ಫಲಾನುಭವಿಗಳಿಗೆ ಜಮೀನನ್ನು ಪರಭಾರೆ ಮಾಡಿದ್ದರಿಂದ, ಕನ್ನಳ್ಳಿಯಂತಹ ಕುಗ್ರಾಮದಲ್ಲಿರುವ ದಲಿತ ಸಮುದಾಯದ ನಾಲ್ಕು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡು ನ್ಯಾಯಾಂಗ ನಿಂದನೆಯಂತಹ ಕ್ರಿಮಿನಲ್ ಮೊಕದ್ದಮೆಯಲ್ಲಿ ಸಿಲುಕಿಕೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ತಾಲೂಕಿನ ಮೂಗೂರು ಹೋಬಳಿಯ ಕನ್ನಳ್ಳಿ ಗ್ರಾಮದ ಸರ್ವೆ ನಂ. 47/2 ರಲ್ಲಿ ಜಯಶಂಕರಸ್ವಾಮಿ ಎಂಬವರಿಗೆ ಸೇರಿದ ಮೂರು ಎಕರೆ ಜಮೀನನ್ನು ಆತನ ದತ್ತುಪುತ್ರ ಗುರುಸ್ವಾಮಿ ಎಂಬವರಿಂದ ಅದೇ ಗ್ರಾಮದ ಮಹದೇವಮ್ಮ ಮತ್ತು ಜಯಮ್ಮ ಎಂಬವರಿಗೆ ತಲಾ ಒಂದೊಂದು ಎಕರೆ ಹಾಗೂ ನಾಗಮ್ಮ ಮತ್ತು ಪುಟ್ಟಬಸಮ್ಮ ಎಂಬವರಿಗೆ ತಲಾ 20 ಗುಂಟೆ ಕೃಷಿ ಜಮೀನನ್ನು 1998ರಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಖರೀದಿಸಿ ಒಡೆತನಕ್ಕೆ ನೀಡಲಾಗಿತ್ತು. ಜಯಶಂಕರ ಸ್ವಾಮಿಯ ಸಹೋದರಿಯರು ಜಮೀನಿನ ಮೂಲ ವಾರಸುದಾರರು ತಾವೆಂದು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಫಲಾನುಭವಿಗಳು ಕಳೆದ ಜೂ.7 ರಿಂದ ಜಮೀನು ಒಡೆತನ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಕಂದಾಯ ಸಚಿವರು ಹಾಗೂ ಲೋಕೋಪಯೋಗಿ ಸಚಿವರು ಪರ್ಯಾಯ ಭೂಮಿ ಒದಗಿಸಬೇಕು. ನಿಗಮ ಮತ್ತು ಫಲಾನುಭವಿಗಳನ್ನು ವಂಚಿಸಿರುವ ಗುರುಸ್ವಾಮಿ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದರು. ತಾಲೂಕು ಸಂಚಾಲಕ ರಾಜು, ಸಂಘಟನಾ ಸಂಚಾಲಕ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಪಿ. ಶಿವಕುಮಾರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement