ಸುತ್ತೂರಿನಲ್ಲಿ ರೈತರಿಗೆ ತರಬೇತಿ
ಕ.ಪ್ರ.ವಾರ್ತೆ ಸುತ್ತೂರು ಜೂ. 14
ನಂಜನಗೂಡು ತಾಲೂಕು ಸುತ್ತೂರು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಭೂಚೇತನ ಯೋಜನೆಯಡಿ ರೈತರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಬಿಳಿಗರೆ ಕೃಷಿ ಅಧಿಕಾರಿ ಬಸವರಾಜಪ್ಪ ಮತ್ತು ಮಹೇಶ್ಕುಮಾರ್, ಅನುವುಗಾರ ಎಸ್.ಆರ್. ಲಕ್ಷ್ಮಣನಾಯಕ ಮಾತನಾಡಿ, ಜಮೀನಿಗೆ ಜಿಪ್ಸ್ಂ, ಜಿಂಕ್ ಸಲ್ಫೇಟ್, ಬೊರಾನ್ ಬೊರಾಕ್ಷ, ಸಾವಯವ ಗೊಬ್ಬರ ಮತ್ತು ಜೈವಿಕ ಕೀಟನಾಶಕ ಬಳಸಿ ಭೂಮಿಯ ಫಲವತ್ತತೆ ಕಾಪಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಅಧಿಕಾರಿ ಮಹೇಶ್ಕುಮಾರ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ದೊರೆಯುವ ಸವಲತ್ತನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ರೈತ ಮುಖಂಡರಾದ ಸಿದ್ದರಾಜು, ರಂಗಪ್ಪಾಜಿ, ಶಾಂತರಾಜು, ಶ್ರೀನಿವಾಸ ನಾಯಕ, ಮಲ್ಲೇಶ್, ಸಿದ್ದನಾಯಕ, ಎಸ್.ಆರ್. ಲಿಂಗರಾಜು ಭಾಗವಹಿಸಿದ್ದರು.