ಮಹಿಳೆ ನಾಪತ್ತೆ
ಮೈಸೂರು: ತವರು ಮನೆಗೆ ಹೋದ ಮಹಿಳೆಯೊಬ್ಬರು ಒಂದೂವರೆ ವರ್ಷದ ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ. ಹಳೇಉಂಡವಾಡಿ ಗ್ರಾಮದ ಯತೀಶ ಎಂಬವರ ಪತ್ನಿ ಮಂಗಳಾ (23) ಅವರು ತಮ್ಮ ಒಂದೂವರೆ ವರ್ಷದ ಪ್ರೀತಮ್ ಎಂಬ ಮಗುವಿನೊಂದಿಗೆ ಜೂ.4 ರಂದು ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಸುಳಿವು ಸಿಕ್ಕಿಲ್ಲ ದೂ. 240222 ಅಥವಾ ಮೊ. 9480805046.
ಯುವಕನ ಕೊಲೆ
ಮೈಸೂರು: ಯುವಕನ ಕತ್ತು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ಶನಿವಾರ ನಡೆದಿದೆ. ಇಲ್ಲಿನ ಚಾಮಲಾಪುರದ ಹುಂಡಿ ನಿವಾಸಿ ಸ್ವಾಮಿ (27) ಕೊಲೆಯಾದವರು. ಪಟ್ಟಣದ ಆರ್.ಪಿ. ರಸ್ತೆಯಲ್ಲಿನ ಬಾರೊಂದರ ಕೊಠಡಿಯಲ್ಲಿ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿದ್ದ ಎನ್ನಲಾಗಿದೆ. ಕೆಲ ಸಮಯದ ಬಳಿಕ ಬಾರ್ನ ನೌಕರ ಕೊಠಡಿ ಪ್ರವೇಶಿಸಿದಾಗ ಸ್ವಾಮಿ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.