ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐಎಫ್ಇಎಟಿ ತಂಡದ ಮೈಸೂರು ಪ್ರವಾಸ

Rashmi Kasaragodu
Updated On : 16 Jun 2013, 10:09 am

ಮೈಸೂರು: ದಿ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಎಸೆಂಶಲ್ ಆಯಿಲ್ಸ್ ಆ್ಯಂಡ್ ಅರೋಮಾ ಟ್ರೇಡ್ಸ್ (ಐಎಫ್ಇಎಟಿ) ಸಂಸ್ಥೆಯ ಸದಸ್ಯರು ಹಮ್ಮಿಕೊಂಡಿರುವ 10 ದಿನಗಳ ಭಾರತ ಪ್ರವಾಸದ ಅಂಗವಾಗಿ ಮೈಸೂರಿನ ಎನ್ಆರ್ ಸಂಸ್ಥೆಗೆ ಭೇಟಿ ನೀಡಿದ್ದರು. ಈ ಸಂಬಂಧ ಐಎಫ್ಇಎಟಿ ಸದಸ್ಯರು ಮೈಸೂರಿಗೆ ಆಗಮಿಸಿ ಎನ್ಆರ್ ಸಂಸ್ಥೆಗೆ ಭೇಟಿ ನೀಡಿದ್ದರು. ಯುಎಸ್ಎ, ಸ್ಪೇನ್, ಈಜಿಪ್ಟ್, ಬೆಲ್ಜಿಯಂ, ಬ್ರೆಜಿಲ್, ಜರ್ಮನಿ, ಇಂಡೋನೇಷ್ಯಾ, ಹಾಂಗ್ಕಾಂಗ್ ಸೇರಿದಂತೆ ಇನ್ನಿತರ ದೇಶಗಳ ವಿವಿಧ ಕಂಪನಿಗಳ ಸಿಇಒಗಳು, ಕೆಮಿಕಲ್ ಎಂಜಿನಿಯರುಗಳು, ತಂತ್ರಜ್ಞರು, ಮಾರುಕಟ್ಟೆ ವ್ಯವಸ್ಥಾಪಕರು ಆಗಮಿಸಿದ್ದರು. ಎನ್ಆರ್ ಗ್ರೂಪ್ನ ವ್ಯವಸ್ಥಾಪನಾ ಪಾಲುದಾರ ಅರ್ಜುನ್ ರಂಗ ಮಾತನಾಡಿ, ಐಎಫ್ಇಎಟಿ ಸದಸ್ಯರು ಮೈಸೂರಿಗೆ ಆಗಮಿಸಿರುವುದು ಸ್ಮರಣೀಯವಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement