ನಾಳೆ ಕೃತಿಗಳ ಬಿಡುಗಡೆ
ಮೈಸೂರು: ಸಂವಹನ ಪ್ರಕಾಶನವು ಹೊರತಂದಿರುವ ಡಾ.ದೇಜಗೌ ಅವರ ಕುವೆಂಪು ಮತ್ತು ರಾಜಕೀಯ ಪ್ರಜ್ಞೆ, ನುಡಿಕಣಜ, ಡಾ.ಸಿಪಿಕೆ ಅವರ ಜನ್ನನ ಅನಂತನಾಥ ಪುರಾಣ, ಡಾ.ಮಳಲಿ ವಸಂತಕುಮಾರ್ರ ಲಂಕೇಶ್ವರ ಕೃತಿಗಳನ್ನು ಜೂ.18ರ ಸಂಜೆ 5.30ಕ್ಕೆ ಜೆಎಲ್ಬಿ ರಸ್ತೆಯಲ್ಲಿರುವ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಬಿಡುಗಡೆಗೊಳಿಸುವರು. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸುವರು.