ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಿರಿಯಾಪಟ್ಟಣ ಗ್ರಂಥಾಲಯ ವಿಸ್ತರಣೆಗೆ ಚಿಂತನೆ

Rashmi Kasaragodu
Updated On : 16 Jun 2013, 10:08 am

 ಡಿ.ಎನ್. ಮಹೇಂದ್ರ
ಮೈಸೂರು: ಎಚ್.ಡಿ. ಕೋಟೆ ಶಾಖಾ ಗ್ರಂಥಾಲಯದಂತೆಯೇ ಪಿರಿಯಾಪಟ್ಟಣ ಶಾಖಾ ಗ್ರಂಥಾಲಯವು ಈಗ ವಿಸ್ತರಣೆಗೊಳ್ಳಬೇಕಿದೆ.
ಜಿಲ್ಲೆಯ ಎಚ್.ಡಿ. ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳು ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಳ್ಳುತ್ತವೆ. ಈಗಾಗಲೇ ಈ ಎರಡೂ ಪಟ್ಟಣಗಳಲ್ಲಿ ಗ್ರಂಥಾಲಯ ಇಲಾಖೆಗೆ ಸೇರಿದ ಸ್ವಂತ ಕಟ್ಟಡ ಇದೆ. ಆದರೆ ಪಿರಿಯಾಪಟ್ಟಣ ಗ್ರಂಥಾಲಯ ಈಗಿನ ಸದಸ್ಯರು ಮತ್ತು ಪುಸ್ತಕಗಳ ಅನುಗುಣವಾಗಿ ವಿಸ್ತಾರಗೊಳ್ಳಬೇಕಾದ ಅನಿವಾರ್ಯತೆ ಇದೆ.
ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಗ್ರಂಥಾಲಯ ಅಂದಿನ ಜನಸಂಖ್ಯೆ, ಸದಸ್ಯರ ಸಂಖ್ಯೆ ಮತ್ತು ಪುಸ್ತಕದ ಸಂಖ್ಯೆಗೆ ಸಾಕಿತ್ತು. ಆದರೆ ಈಗ ಬದಲಾದ ಜನಸಂಖ್ಯೆಗೆ ಅನುಗುಣವಾಗಿ ಕಟ್ಟಡವೂ ಸಹ ವಿಸ್ತಾರಗೊಳ್ಳಬೇಕಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯ ಸಮಸ್ಯೆ ಹೆಚ್ಚೇನೂ ಇಲ್ಲ. ಆದರೆ ವಾಚನಾಲಯಕ್ಕೆ ಸ್ಥಳ ಇದೆ. ಆದರೆ ಓದುಗರಿಗೆ ಪ್ರತ್ಯೇಕ ಕೊಠಡಿ ಇಲ್ಲ. ಈ ಬೇಡಿಕೆ ಹಲವು ವರ್ಷಗಳಿಂದ ಈಡೇರಿಲ್ಲ. ಕಟ್ಟಡಕ್ಕೆ ಮೊದಲ ಮಹಡಿ ನಿರ್ಮಿಸಬೇಕು ಎಂಬ ಉದ್ದೇಶವಂತು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರಕ್ಕೆ ಇದೆ.
ತಾಲೂಕಿನಲ್ಲಿ ಒಟ್ಟು 1,683 ಸದಸ್ಯರಿದ್ದಾರೆ. ಒಟ್ಟು 36,491 ಪುಸ್ತಕಗಳಿವೆ. ತಾಲೂಕಿನ ರಾವಂದೂರು ಗ್ರಾಮ ಪಂಚಾಯಿತಿ ಮಾತ್ರ ಗ್ರಂಥಾಲಯ ನಿರ್ಮಿಸಲು ನಿವೇಶನ ನೀಡಿದೆ. ಉಳಿದಂತೆ ಬೆಟ್ಟದಪುರ ಗ್ರಾಮ ಪಂಚಾಯಿತಿ ನಿವೇಶನ ನೀಡಿ ಕೆಲವು ತಾಂತ್ರಿಕ ಕಾರಣಗಳಿಂದ ಹಿಂದಕ್ಕೆ ಪಡೆದಿದೆ.
ಉಳಿದಂತೆ ತಾಲೂಕಿನ 26 ಗ್ರಾಮ ಪಂಚಾಯಿತಿಯಲ್ಲಿನ ಎಲ್ಲಾ ಗ್ರಂಥಾಲಯಗಳು ಸಹ ಬಾಡಿಗೆ ರಹಿತವಾಗಿ ಗ್ರಾಪಂ ಕಟ್ಟಡದಲ್ಲಿ ನಡೆಯುತ್ತಿವೆ. ಇದರ ಜತೆಗೆ ಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿನ ಡುಂಗ್ರಿ ಗರಾಸಿಯಾ ಅಲೆಮಾರಿ ಗ್ರಂಥಾಲಯ ಇರುವುದು ತಾಲೂಕಿನ ವಿಶೇಷ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement