ಮದುವೆ ನಿಗದಿಯಾಗಿದ್ದ ಯುವತಿ ನಾಪತ್ತೆ
ಮೈಸೂರು: ಮೈಸೂರು ಕೋಟೆಹುಂಡಿ ಗೀತಾಂಜಲಿ (20) ಎಂಬವರು ನಾಪತ್ತೆಯಾಗಿದ್ದಾರೆ ಎಂದು ಅವರ ತಂದೆ ಹುಚ್ಚಯ್ಯ ಜಯಪುರ ಠಾಣೆಗೆ ದೂರು ನೀಡಿದ್ದಾರೆ. ಗೀತಾಂಜಲಿ ಅವರಿಗೆ ಜೂ.30 ರಂದು ವಿವಾಹ ನಿಶ್ಚಯವಾಗಿತ್ತು. ಆದರೆ ಜೂ.10 ರಂದು ಸಂಜೆ 7.30 ರಲ್ಲಿ ಕರೆಂಟ್ ಇಲ್ಲದ ಕಾರಣ ಹೊರಹೋಗಿರುತ್ತೇನೆ ಎಂದು ಹೇಳಿ ಹೋದವಳು ಈವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. 5 ಅಡಿ ಎತ್ತರ, ಎಣ್ಣೆಗೆಂಪು ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ದಿನ ಹೂವಿನ ಡಿಸೈನ್ ಇರುವ ಕಪ್ಪು ಬಣ್ಣದ ನೈಟಿ ಮತ್ತು ಕಪ್ಪು ಬಣ್ಣದ ಸ್ವೆಟರ್ ಧರಿಸಿದ್ದರು. ಇವರ ಬಗ್ಗೆ ಸುಳಿವು ದೊರೆತರೆ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂ.0821 2444800 ಅಥವಾ ಮೊ. 9480805047 ಸಂಪರ್ಕಿಸುವಂತೆ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಕೋರಿದ್ದಾರೆ.