ರಾಜ್ಯ ನಾಟಕ, ನೃತ್ಯ ಶಿಕ್ಷಕರ ಸಂಘ ರಚನೆ
ಮೈಸೂರು: ಕರ್ನಾಟಕ ರಾಜ್ಯ ನಾಟಕ ಮತ್ತು ನೃತ್ಯ ಶಿಕ್ಷಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ಪದಾಧಿಕಾರಿಗಳಾಗಿ ನಾ.ಶ್ರೀನಿವಾಸ್- ಅಧ್ಯಕ್ಷರು, ಕೆ. ಪ್ರಸಾದ್ ಬೆಳ್ಳೂರು, ಅನ್ನಪೂರ್ಣ- ಉಪಾಧ್ಯಕ್ಷರು, ಶಶಿಧರ್ ಭಾರಿಘಾಟ್- ಸಂಘಟನಾ ಕಾರ್ಯದರ್ಶಿ, ಶಿವಾನಂದಸ್ವಾಮಿ- ಕಾರ್ಯದರ್ಶಿ, ರಂಗಸ್ವಾಮಿ- ಸಹ ಕಾರ್ಯದರ್ಶಿ, ನಾ.ನಾಗಭೂಷಣ್- ಖಜಾಂಚಿ, ಸಂತೋಷ್- ರಾಜ್ಯ ಸಂಚಾಲಕರು, ವಿಭಾಗವಾರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೈಸೂರಿನ ಕೃಪಾನಿಧಿ, ಬೆಂಗಳೂರಿನ ಭಾನುಪ್ರಕಾಶ್, ಬೆಳಗಾವಿಯ ಮಲ್ಲೇಶ್, ಗುಲ್ಬರ್ಗದ ಹ್ಯಾಟಿ ರಮೇಶ್ ಆಯ್ಕೆಯಾಗಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಬಿಬಿಎಸ್ಇ, ಐಸಿಎಸ್ಇ ವಸತಿಯುತ ಶಾಲೆಗಳ ನಾಟಕ ಮತ್ತು ನೃತ್ಯ ಶಿಕ್ಷಕರು ಸದಸ್ಯರಾಗಬಹುದು. ಮಾಹಿತಿಗೆ ಮೊ. 87489 42342 ಸಂಪರ್ಕಿಸಬಹುದು.