ಅಪರಿಚಿತ ಮಹಿಳೆಯ ಶವ ಪತ್ತೆ
ಮೈಸೂರು: ಮೈಸೂರು ರೈಲು ನಿಲ್ದಾಣದ ಪಿಟ್ ಲೈನ್ ಯಾರ್ಡ್ ನಂ. ಒಂದರಲ್ಲಿ ನಿಂತಿದ್ದ ಮೈಸೂರು-ಬೆಂಗಳೂರು ಪುಶ್ಪುಲ್ ರೈಲುಗಾಡಿಯ ಕೋಚ್ನಲ್ಲಿ ಸುಮಾರು 60 ವರ್ಷದ ಅಪರಿಚಿತ ಮಹಿಳೆ ಜೂ.17 ರಂದು ಮೃತಪಟ್ಟಿದ್ದಾರೆ. ಈ ಬಗ್ಗೆ ಅಸಹಜ ಮರಣ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಚಹರೆ ಹೀಗಿದೆ- ಸುಮಾರು 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಕೃಶವಾದ ಶರೀರ, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಬಿಳಿ ಕೂದಲು, ಎರಡೂ ಕಿವಿ ಚುಚ್ಚಿರುತ್ತವೆ ಮತ್ತು ಮೂಗಿನ ಎಡಭಾಗದಲ್ಲಿ ಚುಚ್ಚಿದ ಗುರುತಿದೆ. ಮೃತ ದೇಹವನ್ನು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿಡಲಾಗಿದೆ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೇಲ್ವೆ ಠಾಣೆ ಅಥವಾ ದೂ. 2516579 ಸಂಪರ್ಕಿಸಿ.