ಅರಸನಕೆರೆ ಶಾಲೆಗೆ ದಾನಿಗಳ ಕೊಡುಗೆ
ಕ.ಪ್ರ.ವಾರ್ತೆ ಮೈಸೂರು ಜೂ. 17
ತಾಲೂಕಿನ ಅರಸನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ವಿವಿಧ ಕೊಡುಗೆಗಳನ್ನು ನೀಡಿದ್ದಾರೆ. ಇದೇ ಗ್ರಾಮದಲ್ಲಿರುವ ಟಿಬೆಟಿಯನ್ ಗುರೂಜಿ ಆಶ್ರಮದಿಂದ ಶಾಲೆಯ 1 ರಿಂದ 7ನೇ ತರಗತಿಯ ಎಲ್ಲಾ ಮಕ್ಕಳಿಗೆ ಸುಮಾರು 40 ಸಾವಿರ ಬೆಲೆ ಬಾಳುವ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಹಿಂದೆಯೂ ಶಾಲೆಯ 5, 6, 7 ನೇ ತರಗತಿ ಮಕ್ಕಳಿಗೆ ಸಾವಿರಾರು ಬೆಲೆ ಬಾಳುವ ಬೆಂಚ್ಗಳನ್ನು ನೀಡುವ ಮೂಲಕ ಮಕ್ಕಳು ನೆಲದಲ್ಲಿ ಕುಳಿತುಕೊಂಡು ವ್ಯಾಸಂಗ ಮಾಡುವುದನ್ನು ತಪ್ಪಿಸಿದ್ದರು. ಜತೆಗೆ ಸಮವಸ್ತ್ರಗಳನ್ನು ವಿತರಿಸಿದ್ದರು ಎಂದು ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮೈಸೂರು ಗ್ರಾಮಾಂತರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಕೆ. ಮಹೇಶ್ ಸ್ಮರಿಸಿದರು.
ಈ ಸಂದರ್ಭದಲ್ಲಿ ಕೊಡುಗೆ ನೀಡಿದ ದಾನಿಗಳಾದ ಟಿಬೆಟಿಯನ್ ಆಶ್ರಮದ ಕಾರ್ಯದರ್ಶಿ ಪೊಂಪ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಇಲಾಖೆಯ ಬಿಆರ್ಸಿ ದೇವರಾಜು, ಇಸಿಒ ಜಯರಾಂ, ಬಿಆರ್ಪಿಗಳಾದ ಮಹದೇವು, ಮುರಳಿ, ಸುರೇಶ್, ಸಿಆರ್ಪಿಗಳಾದ ಅಶೋಕ್, ಜಯಮಲ್ಲರಾಜೇ ಅರಸ್ ಅವರು ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕರಾದ ತೋಂಟದಾರ್ಯ, ಶಿವಪ್ಪ, ನಾಜಿಮಾ, ಜ್ಯೋತಿ ಹಾಗೂ ಊರಿನ ಮುಖಂಡರು ಇದ್ದರು. ಸಿಆರ್ಪಿ ವೆಂಕಟೇಶ್ ಸ್ವಾಗತಿಸಿದರು. ದೀಪು ವಂದಿಸಿದರು.