ಕಬಿನಿ ನದಿ ಪಾತ್ರದಲ್ಲಿ ನಾಲ್ಕು ಲೋಡ್ ಮರಳು ವಶ
ಮೈಸೂರು: ಅಕ್ರಮವಾಗಿ ನದಿ ದಡದಲ್ಲಿ ದಾಸ್ತಾನು ಮಾಡಿದ್ದ 4 ಲೋಡ್ ಮರಳನ್ನು ಜಿಲ್ಲಾ ಪೊಲೀಸ್ ತಂಡವು ವಶಪಡಿಸಿಕೊಂಡಿದೆ. ತಾಲೂಕಿನ ಕುಪ್ಪೇಗಾಲ ಗ್ರಾಮದ ಕಬಿನಿ ನದಿಪಾತ್ರದಲ್ಲಿ ಅಕ್ರಮವಾಗಿ ಸಾಗಣೆ ಮಾಡಲು ದಾಸ್ತಾನು ಮಾಡಿದ್ದ 4 ಲೋಡ್ ಮರಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಗೆ ಮಾಹಿತಿ ನೀಡಿದ್ದು, ಕಾನೂನಿನ ಅನ್ವಯ ಕ್ರಮಕೈಗೊಂಡಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಕಂಡುಬಂದಲ್ಲಿ ಕೂಡಲೇ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.