ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಮಾಜಮುಖಿ ರೀತಿನೀತಿ ಅಳವಡಿಸಿಕೊಳ್ಳಲು ಕರೆ

Rashmi Kasaragodu
Updated On : 17 Jun 2013, 11:46 am

ಕ.ಪ್ರ.ವಾರ್ತೆ    ಮೈಸೂರು    ಜೂ. 17
ಕೌಟುಂಬಿಕ ಬದುಕಿಗೂ, ಸಾಮಾಜಿಕ ಬದುಕಿಗೂ ಸಾಕಷ್ಟು ವ್ಯತ್ಯಾಸವಿದೆ. ನಾವು ಸಮಾಜ ಪ್ರವೇಶಿಸುವಾಗ ನಮ್ಮ ರೀತಿ ನೀತಿಗಳು ಸಮಾಜಮುಖಿಯಾಗಿರಬೇಕು ಎಂದು ವಿದ್ವಾಂಸ ಪಾವಗಡ ಪ್ರಕಾಶ ರಾವ್ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಚೀನ ಮೌಲ್ಯಗಳು ಮತ್ತು ಯುವಜನತೆ ವಿಷಯ ಕುರಿತು ಅವರು ಮಾತನಾಡಿದರು.
ನಮ್ಮ ಪ್ರಾಚೀನ ಸಂಸ್ಕೃತಿ ಅನೇಕ ಮೌಲ್ಯಗಳನ್ನು ನೀಡಿದೆ. ಪ್ರಾರ್ಥನೆ ಒಂದು ಅಮೂಲ್ಯವಾದದ್ದು. ಅದು ಋಗ್ವೇದದ ಸಾರವೆ ಆಗಿದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮುಂತಾದ ಆಶಯವೆ ಉತ್ತಮ ಮೌಲ್ಯಗಳನ್ನು ಮನುಷ್ಯನಿಗೆ ತೋರಿಸುತ್ತದೆ ಎಂದರು.
ಕುಟುಂಬದಲ್ಲಿ ಒಬ್ಬ ವ್ಯಕ್ತಿಯಾಗಿ ಬದುಕುವುದಕ್ಕೂ ಸಮಾಜದಲ್ಲಿ ಒಬ್ಬ ನಾಗರಿಕನಾಗಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಮಾಜ ಪ್ರವೇಶ ಮಾಡುವಾಗ ನಮ್ಮ ರೀತಿ ನೀತಿಗಳಲ್ಲಿ ಬದಲಾವಣೆಯಾಗಬೇಕು. ಆ ಬದಲಾವಣೆ ಸಮಾಜಮುಖಿ ಆಗಿರಬೇಕು. ಸಮಾಜ ನಿರೀಕ್ಷಿಸುವಂತಿರಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಯುವಜನತೆ ಯಾವುದೇ ಆಸೆ-ಆಮಿಷಕ್ಕೆ ಒಳಗಾಗಬಾರದು. ಸಮಾಜದಲ್ಲಿ ಒಂದಿಷ್ಟು ರೋಗಗ್ರಸ್ಥ ವ್ಯವಸ್ಥೆ ಇರಬಹುದು. ಭ್ರಷ್ಟಾಚಾರ, ಅನೈತಿಕತೆ ಸಮಾಜದಲ್ಲಿ ನೆಲೆಯೂರಿರಬಹುದು. ಅವುಗಳು ನಮಗೆ ಆದರ್ಶವಾಗಬಾರದು. ಬದಲಿಗೆ ಆದರ್ಶಯುತವಾಗಿ ಬದುಕುವವರು ನಮಗೆ ಆದರ್ಶರಾಗಬೇಕು ಎಂದರು.
ಪ್ರಾಂಶುಪಾಲ ಪ್ರೊ.ಬಿ.ವಿ. ಸಾಂಬಶಿವಯ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಡೀನ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement