ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಹಾರದಷ್ಟೇ ಪರಿಸರವೂ ಮುಖ್ಯ: ಮೋಕ್ಷಪತಿ ಶ್ರೀ

Rashmi Kasaragodu
Updated On : 19 Jun 2013, 12:17 pm

ಕ.ಪ್ರ.ವಾರ್ತೆ   ರಾವಂದೂರು   ಜೂ. 18
ಮನುಷ್ಯನಿಗೆ ಆಹಾರದಷ್ಟೆ ಪರಿಸರವು ಅಷ್ಟೆ ಮುಖ್ಯವಾಗಿದೆ, ಇದರ ಸಂರಕ್ಷಣೆಗೆ ಎಲ್ಲರು ಮುಂದಾಗಬೇಕು ಎಂದು ರಾವಂದೂರು ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ ಕರೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಏಕಲ್ ವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿದ್ದು, ಅನೇಕ ವಿಕೋಪಗಳಿಗೆ ನಾಂದಿ ಹಾಡುತ್ತಿದೆ. ಆದ್ದರಿಂದ ಮನುಷ್ಯ ಎಚ್ಚೆತ್ತು ಪರಿಸರ ಸಂರಕ್ಷಣೆಯತ್ತ ಹೆಚ್ಚು ಒತ್ತು ನೀಡಬೇಕೆಂದು ತಿಳಿಸಿದರು.
ರಾವಂದೂರು ಹೋಬಳಿ ಏಕಲ್ ವಿದ್ಯಾಲಯದ ಅಧ್ಯಕ್ಷ ಆರ್.ಟಿ. ಸತೀಶ್ ಮಾತನಾಡಿದರು. ವೈದ್ಯಾಧಿಕಾರಿ ಡಾ. ಪ್ರದೀಪ್, ಜಿಲ್ಲಾ ವೀಕ್ಷಣಾಧಿಕಾರಿ ಸುರೇಶ್ಕುಮಾರ್, ರಾಜೇಂದ್ರ, ಮಣಿರಾಜ್, ರಾಜೇಶ್, ಸ್ವಾಮೀಗೌಡ, ರಾಜು, ಮುಕುಂದ, ಸವಿತಾ, ರಮ್ಯ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement