ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

71ನೇ ವಸಂತಕ್ಕೆ ಗಣಪತಿ ಸಚ್ಚಿದಾನಂದ ಶ್ರೀ

Mainashree
Updated On : 20 Jun 2013, 12:08 pm

ಕ.ಪ್ರ.ವಾರ್ತೆ  ಮೈಸೂರು  ಜೂ. 19
ನಗರದ ಅವಧೂತ ದತ್ತಪೀಠದ ಪೀಠಾಧ್ಯಕ್ಷರಾದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳ 71ನೇ ವರ್ಧಂತಿ ಅಂಗವಾಗಿ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು.
15ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ನಾದಮಂಟಪ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ನೂರಾರು ಭಕ್ತಾಧಿಗಳ ಜಯ ಘೋಷದ ನಡುವೆ ಶ್ರೀಗಳ ವರ್ಧಂತಿ ಮಹೋತ್ಸವದ ಐದು ದಿನಗಳ ಆಚರಣೆಯನ್ನು ಪಾದಪೂಜೆ ಮೂಲಕ ಆರಂಭಿಸಲಾಯಿತು.
ಸಿಂಹಾಸನದಂತಿರುವ ಪೀಠದ ಮೇಲೆ ಧ್ಯಾನಾಸಕ್ತರಾಗಿದ್ದ ಗಣಪತಿ ಸಚ್ಚಿದಾನಂದ ಶ್ರೀಗಳ ಪಾದಪೂಜೆ ಮಾಡಿದ ಕಿರಿಯ ಶ್ರೀಗಳು ವಿವಿಧ ಹೂಗಳನ್ನು ಹಾಕಿ ಗೌರವ ಸಲ್ಲಿಸಿದರು. ಆಶ್ರಮದ ವಟುಗಳು ವೇದಘೋಷ ಮೊಳಗಿಸಿದರು. ಈ ಮಹೋತ್ಸವ ಜೂನ್ 23ರಂದು ಅಂತ್ಯಗೊಳ್ಳಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement