ಅನಕ್ಷರಸ್ಥರ ಮುಖ್ಯವಾಹಿನಿಗೆ ತನ್ನಿ: ಶ್ರೀನಿವಾಸ್
ಕ.ಪ್ರ.ವಾರ್ತೆ ಮೈಸೂರು ಜೂ. 19
ಅನಕ್ಷರಸ್ಥರಿಗೆ ಸ್ವಯಂ ಸೇವಾ ಮನೋಭಾವದಿಂದ ಕಲಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಂತೆ ಜೆ.ಕೆ. ಟೈರ್ಸ್ ಸಂಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಶ್ರೀನಿವಾಸ್ ಹೇಳಿದರು.
ಜಿಲ್ಲಾ, ತಾಲೂಕು ಲೋಕಶಿಕ್ಷಣ ಸಮಿತಿ ಹಾಗೂ ಜೆ.ಕೆ. ಟೈರ್ಸ್ ಸಂಸ್ಥೆಯ ಆಶ್ರಯದಲ್ಲಿ ನಗರದ ಎನ್ಟಿಎಂಎಸ್ ಶಾಲೆಯಲ್ಲಿ ಬುಧವಾರ ನಡೆದ ಸ್ವಯಂ ಸೇವಕ ಬೋಧಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾ ಮನೋಭಾವದಿಂದ ಮನುಷ್ಯ ದೊಡ್ಡವನಾಗುತ್ತಾನೆ. ನಮ್ಮ ಸಂಸ್ಥೆ ಈ ವರ್ಷ 2 ಸಾವಿರ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸಮುದಾಯದ ಸಹಕಾರ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ. ಶಂಕರೇಗೌಡ ಮಾತನಾಡಿದರು.
ಕಾರ್ಯಕ್ರಮ ಸಂಯೋಜಕ ತೇ.ಸಿ. ವಿಶ್ವೇಶ್ವರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಎಂ. ಮಂಜುನಾಥ್ ತರಬೇತಿ ನೀಡಿದರು. ಜಿಲ್ಲಾ ಸಂಯೋಜಕರಾದ ರವಿ, ಎಚ್.ಎಂ. ಕೋಮಲಾ, ಇಸ್ರತ್ ಉನ್ನಿಷಾ, ವಾಸು ಇದ್ದರು. ಜೆ.ಕೆ. ಟೈರ್ಸ್ನ ಮೀನಾಕ್ಷಿ ನಿರೂಪಿಸಿದರು. ಸುರೇಶ್ ವಂದಿಸಿದರು.