ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಡಿವ ನೀರಿಗೆ ಆಗ್ರಹಿಸಿ ಖಾಲಿ ಕೊಡ ಪ್ರತಿಭಟನೆ

Mainashree
Updated On : 20 Jun 2013, 12:04 pm

ಕ.ಪ್ರ.ವಾರ್ತೆ  ಸುತ್ತೂರು  ಜೂ. 19
ಸಮೀಪದ ಕಲ್ಮಳ್ಳಿಯಲ್ಲಿ ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಬಿಳಿಗೆರೆ ಗ್ರಾಪಂ ಕಚೇರಿ ಬಳಿ ಬುಧವಾರ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟಿಸಿದರು.
ಕಳೆದ 3 ತಿಂಗಳಿಂದ ಕೆಟ್ಟುಹೋದ ಮೋಟಾರು ಸರಿಪಡಿಸಿಲ್ಲ. ಗ್ರಾಮದ ಜಿಪಂ ಮಾಜಿ ಸದಸ್ಯ ಕೆ.ಎಸ್. ಶಿವಕುಮಾರ್ ಅವರ ಜಮೀನಿನ ಬಾವಿಯಲ್ಲಿ ನೀರು ತಂದು ಜೀವನ ಮಾಡುತ್ತಿದ್ದೆವು. ಆದರೆ ಈಗ ಅಲ್ಲಿಯೂ ನೀರು ನಿಂತು ಹೋಗಿದೆ. ಈಗ ಜೀವನ ನಡೆಸುವುದೆ ಕಷ್ಟವಾಗಿದೆ ಎಂದು ಆರೋಪಿಸಿದ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿದರು.
ಮೂರು ತಿಂಗಳಿಂದ ಕೆಟ್ಟು ಹೋದ ಯಂತ್ರ ಸರಿಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ನಂಜುಂಡಸ್ವಾಮಿ, ರಾಜು, ಸುಬ್ಬಪ್ಪ, ಮಹದೇವಸ್ವಾಮಿ, ಬಸವಣ್ಣ, ಮಹಿಳಾ ಸಂಘದ ಸವಿತಾ, ಚೆನ್ನಪ್ಪ, ಗೌರಮ್ಮ, ಶಶಿಕಲಾ, ರಾಜಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement