ದಲಿತ ನೀತಿ ಖಂಡಿಸಿ ಪ್ರತಿಭಟನೆ
ಬೈಲಕುಪ್ಪೆ: ಮಹದೇವಯ್ಯ ಅವರು ದಲಿತರೆಂಬ ಕಾರಣಕ್ಕಾಗಿ ತಮ್ಮ ಜಮೀನನ್ನು ಉಳುಮೆ ಮಾಡಲು ಬಿಡುತ್ತಿಲ್ಲ, ಅಲ್ಲದೇ ಪೊಲೀಸರು ದಲಿತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಜೂ.22 ರಂದು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿರುವುದಾಗಿ ಬೈಲಕುಪ್ಪೆ ಗ್ರಾಪಂ ಸದಸ್ಯ ರಾಜು ತಿರುಮಲಾಪುರ ತಿಳಿಸಿದರು.
ಇಲ್ಲಿಗೆ ಸಮೀಪದ ತಿರುಮಲಾಪುರ ಗ್ರಾಮದ ಎಸ್. ಮಹದೇವಯ್ಯ ಅವರು ಮತ್ತು ಅದೇ ಗ್ರಾಮದ ರಾಜೇಗೌಡ ಅವರ ನಡುವೆ ಜಮೀನಿಗೆ ಸಂಬಂಧಿಸಿದಂತೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಎಸ್. ಮಹದೇವಯ್ಯ ಅವರ ಕಡೆ ತೀರ್ಪು ನೀಡಿತ್ತು. ಆದರೂ, ಉಳುಮೆ ಮಾಡುವಾಗ ಅನಗತ್ಯವಾಗಿ ಪೊಲೀಸರು ತೊಂದರೆ ಕೊಡುತ್ತಿದ್ದಾರೆ. ಇದನ್ನು ವಿರೋಧಿಸಿ ವಿವಿಧ ಸಂಘ ಸಂಸ್ಥೆಗಳು, ಗ್ರಾಮಸ್ಥರು ಮತ್ತು ನಮ್ಮ ಕುಟುಂಬದವರೊಂದಿಗೆ ಬೈಲಕುಪ್ಪೆ ಠಾಣೆ ಎದುರು ಧರಣಿ ಸತ್ಯಾಗ್ರಹ ಮಾಡಲು ತೀರ್ಮಾನಿಸಿರುವುದಾಗಿ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂದರ್ಭದಲ್ಲಿ ಮಹದೇವ, ಮಧು, ರಾಧಾಕೃಷ್ಣ, ಅಯ್ಯಪ್ಪ, ಅಶೋಕ, ದೇವಯ್ಯ, ಚಂದ್ರಯ್ಯ, ರಾಜು, ಬಾಲಸುಬ್ರಹ್ಮಣ್ಯ, ಸ್ವಾಮಿ, ಮಂಜು, ಚಿಕ್ಕಯ್ಯ, ರುದ್ರಸ್ವಾಮಿ, ಕೃಷ್ಣಕುಟ್ಟಿ, ಮಂಜುನಾಯಕ, ರವಿ, ರಂಜಿತ್ ಇದ್ದರು.