ರಾಹುಲ್ ಜನ್ಮದಿನಾಚರಣೆ, ಸಸಿ ವಿತರಣೆ
ಪಿರಿಯಾಪಟ್ಟಣ: ಪ್ರತಿಯೊಬ್ಬ ನಾಗರಿಕರೂ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಹೇಳಿದರು.
ಇಲ್ಲಿನ ತಾಪಂ ಆವರಣದಲ್ಲಿ ರಾಹುಲ್‌ಗಾಂಧಿ ಅವರ 43ನೇ ಜನ್ಮದಿನಾಚರಣೆ ಹಾಗೂ ವೆಂಕಟೇಶ್ ಅವರು 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ರೈತರಿಗೆ ಉಚಿತವಾಗಿ ಸಸಿ ವಿತರಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸುವುದರ ಜತೆಗೆ ಗಿಡಮರಗಳ ಸಂರಕ್ಷಣೆ ಹಾಗೂ ಸಸಿಗಳನ್ನು ನೆಡುವುದರ ಮೂಲಕ ಪರಿಸರವನ್ನು ಸಂರಕ್ಷಿಸಬೇಕು. ರೈತರು ತಮ್ಮ ಜಮೀನುಗಳಲ್ಲಿ ಸಾಧ್ಯವಾದಷ್ಟು ಸಸಿಗಳನ್ನು ಬೆಳಸುವ ಮೂಲಕ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಶಾಸಕ ಕೆ. ವೆಂಕಟೇಶ್ ಅವರ ಪುತ್ರ ನಿತಿನ್ ಮಾತನಾಡಿದರು. ತಾಪಂ ಸದಸ್ಯರಾದ ಬಿ.ವಿ. ಅನಿತಾ, ಸರಸ್ವತಿ, ಆರ್.ಸಿ. ಚಂದ್ರು, ನವಿಲೂರು ಮಹದೇವ್, ಯೂತ್ ಕಾಂಗ್ರೆಸ್ ತಾ. ಅಧ್ಯಕ್ಷ ಮಹಮ್ಮದ್‌ಷಫಿ, ಮುಖಂಡರಾದ ಕಾಂತರಾಜ್, ಶಿವರಾಜ್, ಕುಮಾರ್, ಮಂಜು, ಶಿವಣ್ಣ, ಹರೀಶ್ ಇದ್ದರು.