ಸುದ್ದಿ ಸಂಕ್ಷೇಪ
ಚಿಕ್ಕಣ್ಣಗೆ ಸ್ಥಾನ ನೀಡಲು ಮನವಿ
ಮೈಸೂರು: ಮಾಜಿ ಶಾಸಕ ಚಿಕ್ಕಣ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ಅಥವಾ ನಿಗಮ-ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡುವಂತೆ ನೆಹರು ಯುವ ಪ್ರಶಸ್ತಿ ವಿಜೇತ ಎಸ್.ಡಿ. ಓಂಕಾರ್ ಜೈನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ 40 ವರ್ಷಗಳಿಂದಲೂ ಕಾರ್ಯನಿರ್ವಹಿಸಿ, ಶಾಸಕರಾಗಿ ಹಾಗೂ ಜಿಲ್ಲೆಯ ನಾಯಕ ಸಮುದಾಯದ ಮತ್ತು ಹಿಂದುಳಿದ ದೀನ-ದಲಿತರ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
25 ರಂದು ಸನ್ಮಾನ
ಭಾರತೀಯ ಮೌಲ್ಯಮಾಪಕರ ಸಂಘವು ಜೂ.25 ರಂದು ಸಂಜೆ 5.30ಕ್ಕೆ ಎಂಜಿನಿಯರುಗಳ ಸಂಸ್ಥೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪಿ.ಕೆ. ತ್ಯಾಗರಾಜನ್ ಹಾಗೂ ಇತರೆ ಪದಾಧಿಕಾರಿಗಳನ್ನು ಸನ್ಮಾನಿಸಲಿದೆ. ಸ್ಥಳೀಯ ಅಧ್ಯಕ್ಷ ಟಿ.ವಿ. ಚಂದ್ರ ಅಧ್ಯಕ್ಷತೆ ವಹಿಸುವರು.