ಜು.25ಕ್ಕೆ ಕ್ರೀಡಾಪ್ರತಿನಿಧಿಗಳ ಸಭೆ
ಮೈಸೂರು: ಮೈಸೂರು ವಿವಿ 2013- 14ನೇ ಸಾಲಿನ ಕ್ರೀಡಾ ಕಾರ್ಯಕ್ರಮಗಳನ್ನು ರೂಪಿಸಲು ಸಂಯೋಜಿತ ಹಾಗೂ ನಿಯೋಜಕ ಕಾಲೇಜುಗಳ ಪ್ರತಿನಿಧಿಗಳ ವಾರ್ಷಿಕ ಸಭೆಯು ಜು.25ರ ಬೆಳಗ್ಗೆ 11ಕ್ಕೆ ಸ್ಪೋರ್ಟ್ಸ್ ಪೆವಿಲಿಯನ್ ಹೊಸ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ ತಿಳಿಸಿದ್ದಾರೆ.
ಸಭೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕ್ರೀಡಾ ಕಾರ್ಯದರ್ಶಿಗಳು ಪಾಲ್ಗೊಳ್ಳಬೇಕು. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಸ್ಥಳದಲ್ಲಿಯೇ ಒಪ್ಪಿಗೆ ಸೂಚಿಸುವ ಹೊಣೆಗಾರಿಕೆಯನ್ನು ಈ ಪ್ರತಿನಿಧಿಗಳಿಗೆ ನೀಡಬೇಕು.
ಪ್ರತಿನಿಧಿಗಳ ಪ್ರಯಾಣ ಹಾಗೂ ದಿನ ಭತ್ಯೆಗಳನ್ನು ಆಯಾ ಕಾಲೇಜಿನ ಕ್ರೀಡಾನಿಧಿಯಿಂದಲೇ ಪ್ರಾಂಶುಪಾಲರು ಭರಿಸಬೇಕು ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಮಂಡಿಸಲು ವಿವಿ ಕ್ರೀಡಾಪಟುಗಳಿಗೆ ಸಂಬಂಧಪಟ್ಟ ಸಲಹೆ, ಸೂಚನೆಗಳು ಇದ್ದಲ್ಲಿ ಜು.18 ರೊಳಗೆ ತಲುಪಿಸಬೇಕು ಎಂದು ತಿಳಿಸಿದ್ದಾರೆ.