ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಫೋನ್ ಇನ್' ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ

Mainashree
Updated On : 20 Jun 2013, 11:34 am

ಮೈಸೂರು: ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಮೇಗೌಡ ಅವರು 2- 3 ಬಾರಿ ಮೊಬೈಲ್ನಲ್ಲಿ ಮಾತನಾಡಿದರು. ಇವರಿಗೆ ಇತರೆ ಅಧಿಕಾರಿಗಳು ಸಹ ಸಾಥ್ ನೀಡಿದರು. ಹೌದು, ಜನರ ಸಮಸ್ಯೆಗಳನ್ನು ಕೇಳುವ ಸಲುವಾಗಿ ತಿಂಗಳಿಗೊಮ್ಮೆ 1 ಗಂಟೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆದರೆ, ಈ ಕಾರ್ಯಕ್ರಮದಲ್ಲೂ ಸಹ ಜಿಲ್ಲಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಮೊಬೈಲ್ನಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿಯವರು ಮೊಬೈಲ್ ಮಾತಿನಿಂದಾಗಿ ಸಾರ್ವಜನಿಕರು 2 ಕರೆಗಳು ಕಡಿತಗೊಂಡವು. ಅವರಲ್ಲಿ ಶಿವಕುಮಾರ್ ಎಂಬವರು ಮಾತ್ರ ಮತ್ತೆ ಕರೆ ಮಾಡಿ ಮಾತನಾಡಿದರು. ಇನ್ನೂ ಜಿಲ್ಲಾಧಿಕಾರಿಯವರು ಸಾರ್ವಜನಿಕರು ದೂರುಗಳನ್ನು ಕೇಳುತ್ತಿರುವಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಕುಮುದಾ ಗಿರೀಶ್ ಅವರು ಮೊಬೈಲ್ ಮಾತಿನಲ್ಲಿ ನಿರತರಾಗಿದ್ದರು. ಇದೇ ರೀತಿ ಇತರೆ ಅಧಿಕಾರಿಗಳ ಮೊಬೈಲ್ ಸಹ ಆಗಾಗ ರಿಂಗ್ ಆಗುತ್ತಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement