ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹೊಸ ಮದ್ಯದಂಗಡಿಗೆ ಅನುಮತಿ ಖಂಡಿಸಿ ಧರಣಿ

Mainashree
Updated On : 20 Jun 2013, 11:31 am

ಕ.ಪ್ರ.ವಾರ್ತೆ  ಮೈಸೂರು  ಜೂ. 20
ಹೊಸ ಮದ್ಯದಂಗಡಿಗಳ ಆರಂಭಕ್ಕೆ ಅನುಮತಿ ನೀಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಎಐಡಿವೈಒ ಕಾರ್ಯಕರ್ತರು ಗಾಂಧಿಚೌಕದಲ್ಲಿ ಗುರುವಾರ ಪ್ರತಿಭಟಿಸಿದರು.
ಬಜೆಟ್ ಮಂಡನೆ ಮುಂಚಿತವಾಗಿಯೇ ಹೊಸದಾಗಿ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ವಿಚಾರ ಪ್ರಸ್ತಾಪಿಸಿರುವುದು ಸರಿಯಲ್ಲ.
ಸರ್ಕಾರದ ಈ ಕ್ರಮದಿಂದ ಕುಡಿತದ ವ್ಯಸನವು ಸಮಾಜವನ್ನು ಮತ್ತಷ್ಟು ಆವರಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಯದ ಮೂಲ ವಿಸ್ತರಿಸಲು, 1997ರಿಂದ ಯಾವುದೇ ಹೊಸ ಪರವಾನಗಿ ನೀಡಿಲ್ಲ ಎಂದು ಸರ್ಕಾರವು ಸಮರ್ಥಿಸಿಕೊಳ್ಳುತ್ತಿರುವುದು ಒಪ್ಪುವಂತದಲ್ಲ ಎಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ಅಬಕಾರಿಯನ್ನೇ ದೊಡ್ಡ ಆದಾಯ ತರುವ ಇಲಾಖೆಯನ್ನಾಗಿ ಮಾಡಿಕೊಂಡು, ಪ್ರತಿ ವರ್ಷವೂ ಅಬಕಾರಿ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. ಅಗ್ಗದ ಮದ್ಯ ಮಾರಾಟಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಸಮಾಜದ ಹಿತದೃಷ್ಟಿಯಿಂದ ಯಾವುದೇ ನೆಪಕ್ಕೆ ಸೊಪ್ಪು ಹಾಕದೇ, ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಮುಖಂಡರಾದ ಉಮಾದೇವಿ, ರವಿ, ಯೋಗೇಶ್, ಚಂದ್ರಶೇಖರ ಮೇಟಿ, ಟಿ.ಆರ್. ಸುನಿಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement