ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆ ಡಾ.ಪಿಬಿಎಸ್ ನೆನಪಿನಂಗಳದಲ್ಲಿ

Mainashree
Updated On : 21 Jun 2013, 11:20 am

ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರ್ ಗಾರ್ಡನ್ ಸಿಟಿ ವತಿಯಿಂದ ಜೂ.23 ರಂದು ಕಲಾಮಂದಿರದಲ್ಲಿ ಗಾನಗಂಧರ್ವ ಡಾ.ಪಿ.ಬಿ. ಶ್ರೀನಿವಾಸ್ ನೆನಪಿನಂಗಳದಲ್ಲಿ - ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 5.30ಕ್ಕೆ ನಡೆಯುವ ಸಮಾರಂಭವನ್ನು ಸಂಗೀತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಗವರ್ನರ್ ಎಂ.ವಿ. ದೇವಿಪ್ರಸಾದ್ ಅವರು ಶಾಸಕರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ನಟ ಮಂಡ್ಯ ರಮೇಶ್ ಅವರನ್ನು ಸನ್ಮಾನಿಸುವರು ಎಂದು ಸಂಸ್ಥೆಯ ಅಧ್ಯಕ್ಷ ವಿ. ನಾಗರಾಜ್ ಬೈರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮವನ್ನು ಮಿಮಿಕ್ರಿ ದಯಾನಂದ್ ನಿರೂಪಿಸಲಿದ್ದು, ಮೈಸೂರಿನ ಸೌಂಡ್ ಎನ್ ರಿದಂ ತಂಡದವರು ಪಿ.ಬಿ. ಶ್ರೀನಿವಾಸ್ ಹಾಡಿರುವ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸುವರು. ಚಾಮರಾಜ್ ತಂಡದವರು ಕೆಲವು ಹಾಡುಗಳಿಗೆ ನೃತ್ಯ ಮಾಡುವರು. ನಮ್ಮ ಸಂಸ್ಥೆಯು ಬಡವರ ಮತ್ತು ಹಿಂದುಳಿದವರ ಏಳಿಗೆಗಾಗಿ ಸುಮಾರು 20 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ 100 ಬಡ ಮಕ್ಕಳಿಗೆ 1 ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ನೀಡಿ ದಾಖಲೆ ಮಾಡಿದೆ ಎಂದರು.
ಪದಾಧಿಕಾರಿಗಳಾದ ಎನ್.ಆರ್. ರಾಜಶೇಖರ್, ಎನ್. ಸುಬ್ರಹ್ಮಣ್ಯ, ಬಿ.ಎನ್. ನಾಯಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement