'ತಂಬಾಕು ಬೆಳೆಗಾರರು ಹೆಚ್ಚು ಮರ ಬೆಳೆಸಲಿ'
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಜೂ. 22
ತಂಬಾಕು ರೈತರು ತಮಗೆ ಅಗತ್ಯವಿರುವ ಉರುವಲನ್ನು ಪಡೆಯಲು ಹೆಚ್ಚು- ಹೆಚ್ಚು ಮರಗಳನ್ನು ಬೆಳೆಸಬೇಕು ಎಂದು ಜಿಪಿಐ ಕಂಪನಿಯ ವ್ಯವಸ್ಥಾಪಕ ವೈ.ಎಸ್. ಪಾಟೀಲ್ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಜಿಪಿಐ ತಂಬಾಕು ಖರೀದಿದಾರ ಕಂಪನಿ ವತಿಯಿಂದ ರೈತರಿಗೆ ಉಚಿತವಾಗಿ ಸಸಿ ವಿತರಿಸಿ ಮಾತನಾಡಿ, ತಂಬಾಕು ಹದಗೊಳಿಸಲು ರೈತರು ಪ್ರತಿವರ್ಷ ಲಕ್ಷಾಂತರ ಟನ್ಗಳಷ್ಟು ಸೌದೆ ಸುಡುತ್ತಿದ್ದಾರೆ.
ಇದರಿಂದ ಪರಿಸರದಲ್ಲಿ
ಅಸಮತೋಲನ ಉಂಟಾಗಿ ಜೀವ ವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತಿದೆ.
ಆದ್ದರಿಂದ ಪ್ರತಿಯೊಬ್ಬ ರೈತರೂ ಹೆಚ್ಚು ಮರ ಬೆಳೆಸಲು ಮುಂದಾಗಬೇಕು ಎಂದು ತಿಳಿಸಿದರು.
ಹರಾಜು ಅಧೀಕ್ಷಕರಾದ ಬಿ. ಮಂಜುರಾಜ್, ಪುರುಷೋತ್ತಮರಾಜೇ ಅರಸ್ ಮಾತನಾಡಿದರು. ಜಿಪಿಐ ತಂಬಾಕು ಕಂಪನಿ ವತಿಯಿಂದ ರೈತರಿಗೆ ಕ್ರಿಮಿನಾಶಕಗಳ ಸಂಗ್ರಹಣ ಪೆಟ್ಟಿಗೆ ಹಾಗೂ ಅದನ್ನು ಬಳಸಲು ಉಪಯೋಗಿಸುವ ರಕ್ಷಾ ಕವಚಗಳು ಮತ್ತು ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಯೂನಿವರ್ಸಲ್ ಕಂಪನಿಯ ಜೀವೇರ್ಶ ಇದ್ದರು.