ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದು ಪ್ರತಿಭಟನೆ

Rashmi Kasaragodu
Updated On : 24 Jun 2013, 12:42 pm

ಹುಣಸೂರು: ಕೇಂದ್ರ ಸರ್ಕಾರ ಪದೇ ಪದೇ ಇಂಧನ ಬೆಲೆ ಏರಿಕೆ ಹಾಗೂ ಇತ್ತೀಚೆಗೆ ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತ ಹಿತರಕ್ಷಣಾ ಸಮಿತಿಯಿಂದ ಜೂ. 24 ರ ಬೆಳಗ್ಗೆ ಪಟ್ಟಣದಲ್ಲಿ ರಸ್ತೆತಡೆ ನಡೆಸಿ, ಪ್ರತಿಭಟಿಸಲಾಗುವುದು ಎಂದು ತಾಲೂಕು ಅಧ್ಯಕ್ಷ ದೊಡ್ಡ ಹನುಮೇಗೌಡ ತಿಳಿಸಿದ್ದಾರೆ.
ರಾಜೂಗೌಡ ನೇಮಕ
ಹುಣಸೂರು: ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಬಿ. ಸೀಹಳ್ಳಿ ಗ್ರಾಮದ ಎಸ್.ಕೆ. ರಾಜೂಗೌಡ  ನೇಮಕವಾಗಿದ್ದಾರೆ.
ಸಾಮೂಹಿಕ ವಿವಾಹ
ಕೆ.ಆರ್. ನಗರ: ಮೈಸೂರಿನಲ್ಲಿ ತಾವು ನಿರ್ಮಿಸಿರುವ ಸಾ.ರಾ. ಕನ್ವೆನ್ಷನ್ ಹಾಲ್ನ ಉದ್ಘಾಟನಾ ಸಮಾರಂಭ ಆಗಸ್ಟ್ 12 ರಂದು ನಡೆಯಲಿದ್ದು, ಅಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ತಿಳಿಸಿದ್ದಾರೆ. ಆಸಕ್ತರು ಸೂಕ್ತ ದಾಖಲಾತಿಗಳೊಂದಿಗೆ ಸಾ.ರಾ. ಸ್ನೇಹ ಬಳಗಕ್ಕೆ ಅರ್ಜಿ ಸಲ್ಲಿಸಬಹುದು. ಸಾಮೂಹಿಕ ವಿವಾಹದಲ್ಲಿ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ತಾಲೂಕಿನವರಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಅರ್ಜಿ ಆಹ್ವಾನ
ಟಿ. ನರಸೀಪುರ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಖಾಲಿ ಇರುವ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿನ ಮಲಿಯೂರು, ಚಿದರವಳ್ಳಿ, ಕಲಿಯೂರು, ತುಂಬಲ, ಹೆಮ್ಮಿಗೆ, ಆಲಗೂಡು, ವಾಟಾಳು, ಅತ್ತಹಳ್ಳಿ, ಬಿ. ಸೀಹಳ್ಳಿ, ಸೋಸಲೆ, ತಲಕಾಡು, ಹೊಸಕೋಟೆ ಹಾಗೂ ಹೆಗ್ಗೂರು ಗ್ರಾಪಂಗಳಲ್ಲಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇರುತ್ತದೆ. ಮೊ. 97415 52339 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement