ಮೀಸಲಾತಿ ಪ್ರಕಟಿಸಲು ಆಗ್ರಹ
ಮೈಸೂರು: ಮೈಸೂರು, ಮಂಗಳೂರು, ಬೆಳಗಾವಿ ಸೇರಿದಂತೆ 7 ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪ್ರಕಟಿಸುವಂತೆ ಸಮಾಜ ರಕ್ಷಣಾ ವೇದಿಕೆ ಆಗ್ರಹಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ 3 ತಿಂಗಳಾಗಿದ್ದರೂ ಸರ್ಕಾರ ಮೀಸಲಾತಿ ಪ್ರಕಟಿಸಿಲ್ಲ. ರಾಜ್ಯದ ಜನರು ಆಯ್ಕೆ ಮಾಡಿರುವ 4,724 ಮಂದಿ ಜನಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಲು ಸರ್ಕಾರ ಅವಕಾಶ ಮಾಡಿಕೊಡದಿರುವುದು ದುರಂತದ ಸಂಗತಿ ಎಂದು ವೇದಿಕೆ ಅಧ್ಯಕ್ಷ ಅಯೂಬ್ಖಾನ್ ತಿಳಿಸಿದ್ದಾರೆ.
ಪರೀಕ್ಷಾ ಶುಲ್ಕ ಪಾವತಿಗೆ ಸೂಚನೆ
ಮೈಸೂರು: ಮೈಸೂರು ವಿವಿ ಬಿ.ಇಡಿ ಪದವಿಯ ಪ್ರಥಮ ಸೆಮಿಸ್ಟರ್ (ಸಿಬಿಸಿಎಸ್ ಮತ್ತು ಸಿಎಜಿಪಿ) ಮೇಕಪ್ ಪರೀಕ್ಷೆಯನ್ನು ಜು.9 ರಿಂದ ನಡೆಸಲಿದೆ. ಪ್ರಾಯೋಗಿಕ ಪರೀಕ್ಷೆ ಪ್ರಾರಂಭವಾಗುವ ಮುನ್ನ ಈ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಮೂಲಕ ಮೈವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ಶುಲ್ಕ ಮತ್ತು ಅರ್ಜಿಯನ್ನು ಜೂ.27 ರೊಳಗೆ, ಪ್ರಶ್ನೆಪತ್ರಿಕೆ ಬೇಡಿಕೆ ಪಟ್ಟಿಯನ್ನು ಜೂ.29 ರೊಳಗೆ ಹಾಗೂ ಪರೀಕ್ಷಾ ಅರ್ಜಿ, ಪ್ರವೇಶಪತ್ರ ಮತ್ತು ಅಭ್ಯರ್ಥಿಯ ಪಟ್ಟಿಯನ್ನು ವಿವಿಗೆ ಜು.1 ರೊಳಗೆ ಸಲ್ಲಿಸಬೇಕು. ಪೂರ್ಣ ಪರೀಕ್ಷೆಗೆ 745, ಪ್ರಾಯೋಗಿಕ ಪರೀಕ್ಷೆಯೂಂದಿಗೆ ಒಂದು ವಿಷಯಕ್ಕೆ 435, ಪ್ರಾಯೋಗಿಕ ಪರೀಕ್ಷೆಯಿಲ್ಲದೆ ಒಂದು ವಿಷಯಕ್ಕೆ 250 ಮತ್ತು ಅಂಕಪಟ್ಟಿ ಶುಲ್ಕ 175 ಪಾವತಿಸಬೇಕು.
'ಕಾಲೇಜಿನ ಸಮಸ್ಯೆ ಪರಿಹರಿಸಿ'
ಮೈಸೂರು: ಮಹಾರಾಣಿ ಕಾಲೇಜಿನ ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿ ಒಟ್ಟಿಗೆ ಇರುವ ಕಲಾ ವಿಭಾಗದಿಂದ ವಾಣಿಜ್ಯ ವಿಭಾಗ ಬೇರ್ಪಡಿಸಿ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಚಾಮರಾಜ ಕ್ಷೇತ್ರದ ಶಾಸಕ ವಾಸು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ. ಈಗಿನ ಕಾಲೇಜನ್ನೇ ವಿಸ್ತರಿಸಿ ಮೂಲ ಸೌಕರ್ಯ ಒದಗಿಸಬೇಕು. ಸಾಕಷ್ಟು ಅರ್ಹತೆಯುಳ್ಳ ಶಿಕ್ಷಕರನ್ನು ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ನೇಮಿಸಬೇಕು ಎಂದು ಕೋರಿದ್ದಾರೆ.
ಫಲಿತಾಂಶ ಪ್ರಕಟ
ಮೈಸೂರು: ಮೈಸೂರು ವಿವಿ 2013ರ ಮೇ- ಜೂನ್ನಲ್ಲಿ ನಡೆಸಿದ 2, 4 ಮತ್ತು 6ನೇ ಸೆಮಿಸ್ಟರ್ ಪದವಿ ಪರೀಕ್ಷೆಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ವಿವಿ ವೆಬ್ಸೈಟ್ ್ಖಟ್ಝಿ-ಟಣಡ್ಟ್ಠಜ.ಛ್ಛ.್ಝಟಿ ನಲ್ಲಿ ಪ್ರಕಟಿಸಿದೆ. ಈ ಅಂಕಗಳಲ್ಲಿ ವ್ಯತ್ಯಾಸವೇನಾದರೂ ಇದ್ದಲ್ಲಿ ಜು.2 ರೊಳಗೆ ದಾಖಲೆಯ ದೃಢೀಕೃತ ಪ್ರತಿಗಳೊಂದಿಗೆ ಸಲ್ಲಿಸಬೇಕು.
ಟೇಬಲ್ ಟೆನ್ನಿಸ್ನಲ್ಲಿ ಮಿಶ್ರಫಲ
ಮೈಸೂರು: ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಕಿರಿಯ ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಮೈಸೂರಿನ ಹುಡುಗಿ ಎಂ.ವಿ. ಸ್ಫೂರ್ತಿ ಜಯಗಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಸಮೀಪದ ನಳಂದ ಗುರುಕುಲದಲ್ಲಿ ಮೈಸೂರು ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಏರ್ಪಡಿಸಿರುವ ನಳಂದ ಗುರುಕುಲ ಕಪ್ನ ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಎಂ.ವಿ. ಸ್ಫೂರ್ತಿ ಅರ್ಚನಾ ಕಾಮತ್ ಅವರನ್ನು 11-7, 11-8, 11-8, 8-11, 11-7 ಅಂತರದಲ್ಲಿ ಪರಾಭವಗೊಳಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಸ್ಫೂರ್ತಿ ಮೈಸೂರಿನ ರಿಧಿ ರೋಹಿತ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ, ಕಿರಿಯ ಬಾಲಕರ ಸಿಂಗಲ್ಸ್ನಲ್ಲಿ ಮೈಸೂರಿನ ವೇದಾಂತ್ ಎಂ. ಆರಸ್ ಸೋತಿದ್ದಾರೆ. ಶ್ರೇಯಲ್ ಕೆ. ತೆಲಂಗ್ ಅವರು ವೇದಾಂತನ್ನು 8-11, 11-7, 11-5, 11-8, 11-7 ಅಂತರದಿಂದ ಮಣಿಸಿದರು.