ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

'ಮೈಸೂರು ಸಾಂಪ್ರದಾಯಿಕ ಕಲೆ ವಿಶ್ವ ಪ್ರಸಿದ್ಧಿಯಾಗಲಿ'

Rashmi Kasaragodu
Updated On : 24 Jun 2013, 12:39 pm

ಕ.ಪ್ರ.ವಾರ್ತೆ   ಮೈಸೂರು   ಜೂ. 23
ಯೋಗದಂತೆ ಮೈಸೂರು ಸಾಂಪ್ರದಾಯಿಕ ಕಲೆಯೂ ವಿಶ್ವ ಪ್ರಸಿದ್ಧಿಯಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಹೇಳಿದರು.
ನಗರದ ಜಯಲಕ್ಷ್ಮೀಪುರಂನಲ್ಲಿ ಭಾನುವಾರ ಶಿವರಾಜವರ್ಮ ಕಲಾಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಯೋಗ ವಿಶ್ವಮಾನ್ಯತೆ ಪಡೆದುಕೊಂಡಿದೆ. ದೇಶ, ವಿದೇಶಗಳಿಂದ ಯೋಗ ಕಲಿಯಲು ಮೈಸೂರಿಗೆ ಬರುತ್ತಿದ್ದಾರೆ. ಕ್ಷೀಣಿಸುತ್ತಿರುವ ಮೈಸೂರು ಸಾಂಪ್ರದಾಯಿಕದ ಕಲೆ ಮತ್ತೆ ಪುನರುಜ್ಜೀವನ ಆಗಬೇಕಿದೆ. ಈ ಕಲೆಯೂ ವಿಶ್ವ ಪ್ರಸಿದ್ಧವಾಗಬೇಕು ಎಂದರು.
ಕಲಾವಿದ ಪ್ರೊ. ರಾಮದಾಸ ಅಡ್ಯಂತಾಯ ಮಾತನಾಡಿ, ಕುಪ್ಪಾಚಾರ್ ಮತ್ತು ರಾಮನರಸಯ್ಯ ಅವರ ಬಳಿಕ ಮೈಸೂರು ಸಾಂಪ್ರದಾಯಿಕ ಕಲೆ ಹೇಳಿಕೊಡುವವರ ಸಂಖ್ಯೆ ಕಡಿಮೆ ಇದೆ. ವಿಜಯನಗರ ಸಾಮ್ರಾಜ್ಯದ ಬಳಿಕ ಈ ಕಲೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಹಾಗೂ ಕಲಾವಿದ ಜಿ.ಎನ್. ಸೀತಾರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಶಿವಲಿಂಗಪ್ಪ, ಕಲಾ ಶಿಕ್ಷಕ ವಿಠಲ ಚುಳಕಾರೆಡ್ಡಿ, ಕೇಂದ್ರದ ಪಿ. ರೇವಣ್ಣ, ಆರ್. ಶಿವಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement