ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎಪಿಎಲ್ ಕಾರ್ಡುದಾರರಿಗೆ ಪಡಿತರ ಸ್ಥಗಿತಕ್ಕೆ ಖಂಡನೆ

Rashmi Kasaragodu
Updated On : 24 Jun 2013, 11:52 am

ಕ.ಪ್ರ.ವಾರ್ತೆ    ಮೈಸೂರು    ಜೂ. 24
ಎಪಿಎಲ್ ಕಾರ್ಡುದಾರರಿಗೆ ಪಡಿತರ ಸ್ಥಗಿತಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಕನ್ನಡ ಯುವಜನ ಜಾಗೃತ ವೇದಿಕೆ ಟೀಕಿಸಿದೆ.
ಸಾರ್ವಜನಿಕರ, ಬುದ್ಧಿಜೀವಿಗಳ, ಜನಪರ ಸಂಘಸಂಸ್ಥೆಗಳ ಹಾಗೂ ಪ್ರತಿಪಕ್ಷ ನಾಯಕರ ಭಾರಿ ವಿರೋಧದ ನಡುವೆಯು ಜು.1 ರಿಂದ ಎಪಿಎಲ್ ಕಾರ್ಡುದಾರರಿಗೆ ಪಡಿತರ ಸೌಲಭ್ಯ ಸ್ಥಗಿತಗೊಳಿಸುತ್ತಿರುವ ಸರ್ಕಾರದ ಕ್ರಮವು ಮಧ್ಯಮ ವರ್ಗದ ಕುಟುಂಬಕ್ಕೆ ಪಡಿತರ ವಂಚಿಸಿದಂತಾಗಿದೆ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಎಂ.ಎನ್. ಸತ್ಯಾನಂದ ವಿಟ್ಟು ಆರೋಪಿಸಿದ್ದಾರೆ.
ಸರ್ಕಾರದ ಈ ನಿರ್ಧಾರ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಬಿಪಿಎಲ್ ಕಾರ್ಡ್ ಪಡೆಯಲು 17 ಸಾವಿರಕ್ಕಿಂತ ಕಡಿಮೆ ಆದಾಯ ಇರಬೇಕು. ಅಂತಹವರಿಗೆ ಮಾತ್ರ 1 ಅಕ್ಕಿ ಹಾಗೂ ಇನ್ನಿತರ ಪಡಿತರ ಕಡಿಮೆ ದರದಲ್ಲಿ ದೊರಕಲಿದೆ.
ಈ ಸೌಲಭ್ಯವನ್ನು ಪಡೆಯಲು ಅನರ್ಹರು ಸಹ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
17 ಸಾವಿರ ಆದಾಯಕ್ಕಿಂತ ಹೆಚ್ಚಿನ ವರಮಾನ ಪಡೆಯುವವರು ಎಪಿಎಲ್ ಕಾರ್ಡುದಾರರು ಎಂದು ಗುರುತಿಸಲಾಗಿದೆ.
ಹೀಗಿರುವಾಗ ಎಪಿಎಲ್ ಕಾರ್ಡ್ದಾರರಿಗೆ ಗರಿಷ್ಠ ಮೊತ್ತವನ್ನು ನಿಗದಿಪಡಿಸಿ ಪಡಿತರ ಮಾರಾಟಕ್ಕೆ ಚಿಂತನೆ ಕೈಬಿಟ್ಟಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement