ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ವ್ಯಕ್ತಿತ್ವ ವಿಕಸನತರಬೇತಿ

Rashmi Kasaragodu
Updated On : 24 Jun 2013, 11:53 am

ಮೈಸೂರು: ವಿದ್ಯಾರ್ಥಿಗಳಲ್ಲಿ ಸಂವಹನ ಮತ್ತು ನಾಯಕತ್ವ ಕೌಶಲವನ್ನು ಕಲಿಸುವ ಸಲುವಾಗಿ ವಿಪ್ಕಾನ್ ಸಂಸ್ಥೆಯು ವ್ಯಕ್ತಿತ್ವ ವಿಕಸನ ಉಚಿತ ತರಬೇತಿಯನ್ನು ಜು.1 ರಿಂದ ಏರ್ಪಡಿಸಿದೆ. ಒಂದು ತಿಂಗಳ ಅವಧಿಯ ಈ ತರಬೇತಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜೂ.29 ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ. 9945889994 ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕ ಜೆ. ಲೋಹಿತ್ ತಿಳಿಸಿದ್ದಾರೆ.
ಒಳಾಂಗಣ ವಿನ್ಯಾಸ ಡಿಪ್ಲೋಮಾ
ಮೈಸೂರು: ಮೈಸೂರು ಇಂಟಿರಿಯರ್ಸ್ ಮತ್ತು ಡಿಸೈನ್ ಅಕಾಡೆಮಿಯು ಒಳಾಂಗಣ ವಿನ್ಯಾಸ ಡಿಪ್ಲೋಮಾ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಮುಕ್ತ ವಿವಿಯ ಅನುಮೋದನೆಯೊಂದಿಗೆ ಆರಂಭಿಸಿರುವ ಒಂದು ವರ್ಷದ ಈ ಡಿಪ್ಲೋಮಾ ತರಗತಿಯಲ್ಲಿ ವಾಸ್ತು, ಬಣ್ಣ, ಮರಗೆಲಸ, ನೆಲವಿನ್ಯಾಸ, ದೀಪಾಲಂಕಾರ, ಹವಾನಿಯಂತ್ರಣ ಹೇಳಿಕೊಡಲಾಗುತ್ತದೆ.  ಜು.10 ರೊಳಗೆ ಅರ್ಜಿ ಸಲ್ಲಿಸಬಹುದು. ಜು.15 ರಿಂದ ತರಗತಿ ಆರಂಭವಾಗಲಿದೆ. ಪ್ರವೇಶ ಮತ್ತು ಅರ್ಜಿಗಾಗಿ ಕಾವೇರಿ ವಿದ್ಯಾಸಂಸ್ಥೆ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿ ಸಂಪರ್ಕಿಸಬಹುದು. ಮಾಹಿತಿಗೆ 0821 4256549 ಅಥವಾ ಮೊ. 9448850502 ಸಂಪರ್ಕಿಸಿ.
ಕಣ್ಣಿನ ಉಚಿತ ತಪಾಸಣೆ
ಮೈಸೂರು: ವಾಸನ್ ಐ ಕೇರ್ ಆಸ್ಪತ್ರೆ ಸಹಯೋಗದಲ್ಲಿ ಜೂ.28 ರಂದು ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಮಂಡಿಮೊಹ್ಲಲಾದ ಶ್ರೀ ಎಲ್ಲಮ್ಮಾಂಬ ಚಂದ್ರಗ್ರಪ್ತಾಂಬ ಧರ್ಮ ಸಂಸ್ಥೆ ಆಯೋಜಿಸಿದೆ. ಅಂದು ಬೆಳಗ್ಗೆ 8.30 ರಿಂದ ಇಲ್ಲಿನ ಮಿಷನ್ ಆಸ್ಪತ್ರೆ ರಸ್ತೆಯಲ್ಲಿರುವ ಎಲ್ಲಮ್ಮಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ತಪಸಣೆ ಶಿಬಿರ ಏರ್ಪಡಿಸಿದೆ ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ. ರುದ್ರೇಶ್ ತಿಳಿಸಿದ್ದಾರೆ.
ಇಂದು ಬಿಜೆಪಿ ನಿಧಿ ಸಂಗ್ರಹ
ನಗರ ಬಿಜೆಪಿ ಕಾರ್ಯಕರ್ತರು ಜೂ.25ರ ಬೆಳಗ್ಗೆ 10ಕ್ಕೆ ಉತ್ತರಖಂಡದಲ್ಲಿನ ಜಲಪ್ರಳಯದಿಂದ ನಲುಗಿರುವವರಿಗಾಗಿ ನಿಧಿ ಸಂಗ್ರಹಿಸುತ್ತಿದೆ. ಕೆ.ಆರ್. ಕ್ಷೇತ್ರದ ಕಾರ್ಯಕರ್ತರು ಅಗ್ರಹಾರ ವೃತ್ತದಲ್ಲಿ, ಗಾಂಧಿ ಚೌಕದಲ್ಲಿ ಚಾಮರಾಜ ಕ್ಷೇತ್ರದ ಕಾರ್ಯಕರ್ತರು ಮತ್ತು ಎನ್.ಆರ್. ಮೊಹಲ್ಲಾ ವೃತ್ತದಲ್ಲಿ ನಿಧಿ ಸಂಗ್ರಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement